ಸುಬ್ರಹ್ಮಣ್ಯ: ಟವರ್ ನಿರ್ಮಾಣದ ವಿಚಾರವಾಗಿ ವ್ಯಕ್ತಿಯೋರ್ವರಿಂದ ಅಪರಿಚಿತರು ಸಾವಿರಾರು ರೂ. ಪಡೆದುಕೊಂಡ ಬಗ್ಗೆ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐವತ್ತೊಕ್ಲು ನಿವಾಸಿ ನಾರಾಯಣ್ ಎನ್ (56) ದೂರುದಾರರು.
ರಿಲಾಯನ್ಸ್ ಕಂಪನಿಯವರೆಂದು ಪರಿಚಯಿಸಿಕೊಂಡು ಪೋನ್ ಕರೆ ಮಾಡಿದ ಅಪರಿಚಿತರು ಟವರ್ ನಿರ್ಮಾಣಕ್ಕೆ ನಾರಾಯಣ್ ರವರ ಸ್ವಂತ ಜಾಗದಲ್ಲಿ ಸ್ಥಳಾವಕಾಶವನ್ನು ಕೋರಿ, ಸದ್ರಿಯವರಿಂದ ಕೆಲವು ದಾಖಲೆಯನ್ನು ಮೊಬೈಲ್ ವಾಟ್ಸಪ್ ಮುಖಾಂತರ ಹಾಗೂ 12-08-2023 ರಿಂದ 14-08-2023 ಅವಧಿಯಲ್ಲಿ ಒಟ್ಟು 52,000/- ರೂಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ:420 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

























