ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ 16ನೇ ವರ್ಷದ ಸ್ಥಾಪಕ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಗತಿ ಸಂಸ್ಥೆಯ ಹುಟ್ಟು 18 ಆಗಸ್ಟ್ 2008 ರಂದು ಆರಂಭಗೊಂಡಿದ್ದು, ತದನಂತರ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು. ಹಲವಾರು ಸವಾಲುಗಳನ್ನು ಎದುರಿಸುತ್ತ ಇದೀಗ 16ನೇ ವರ್ಷದ ಸಂಭ್ರಮದಲ್ಲಿದೆ. ಗೋಕುಲ್ನಾಥ್ ಪಿ. ವಿ. ಹಾಗೂ ಹೇಮಲತಾ ಗೋಕುಲ್ನಾಥ್ ಅವರ ಕನಸಿನ ಕೂಸು ಈ ಪ್ರಗತಿ ಸಂಸ್ಥೆ. ಈ ಸಂಸ್ಥೆಯ ಅಭಿವೃದ್ಧಿಗೆ ಹಗಲಿರುಳು ದುಡಿಯುವ ಜೊತೆಗೆ ಎಲ್ಲಾ ಉಪನ್ಯಾಸಕರಿಗೆ ಸ್ಪೂರ್ತಿಯನ್ನು ತುಂಬಿ, ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಭರವಸೆಯನ್ನು ತರುವ ಪ್ರಯತ್ನ ಕಳೆದು 15 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಹಾಗೂ ಮಾಂಟೆಸರಿ ಶಿಕ್ಷಕಿಯರ ತರಬೇತಿಯನ್ನು ಆರಂಭಿಸಿ ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿಯನ್ನು ನೀಡುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಲಿಟ್ಲ್ ಪ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಬಾಲಕೃಷ್ಣ ಪೋರ್ದಾಲ್ ಆಗಮಿಸಿದ್ದು, ಪ್ರಗತಿ ಸಂಸ್ಥೆಯ ಪರಿಶ್ರಮ ಸಂಸ್ಥೆಯ ಬಗ್ಗೆ ಅವರಿಗೆ ಇದ್ದ ಬಾಂಧವ್ಯವನ್ನು ವಿವರಿಸುತ್ತ ಜೀವನದಲ್ಲಿ ಸಿಹಿ ಹಾಗೂ ಕಹಿ ಅನುಭವಗಳನ್ನು ಅನುಭವಿಸಿದರು ಜೀವನದಲ್ಲಿ ಉತ್ತಮ ಸಾಧನೆ ಮಾಡುವರು. ಜೀವನದಲ್ಲಿ ತಪ್ಪು ಮಾಡುವುದು ಸಹಜ ಆದರೆ ಜೀವನವೇ ತಪ್ಪಾಗ ಬಾರದು ಎಂದು ಹೇಳಿ 16ನೇ ವರ್ಷದ ಸ್ಥಾಪಕರ ದಿನಾಚರಣೆಗೆ ಶುಭಹಾರೈಸಿದರು.

ಸಂಸ್ಥೆಯ ಸಂಚಾಲಕರಾದ ಗೋಕುಲ್ನಾಥ್ ಪಿ. ವಿ. ಪ್ರಗತಿ ನಡೆದು ಬಂದ ಹಾದಿಯನ್ನು ಪಾಸ್ತಾವಿಕವಾಗಿ ವಿವರಿಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪ್ರಮೀಳಾ ಮಾತನಾಡಿ, ಪ್ರಗತಿ ಸಂಸ್ಥೆಯು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ದಿಯನ್ನು ಕಾಣಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ನಿಕೋಲಸ್ ಗೋವಿಯಸ್ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತ ಗೋಕುಲ್ನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಒಲಿವಿಯಾ ಪಾಯಸ್ ಇವರು ಪ್ರಾರ್ಥಿಸಿದರು, ಅನುಪಮ ಸ್ವಾಗತಿಸಿದರು. ಹರ್ಷಿತ ವಂದಿಸಿದರು, ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

























