ಮಂಗಳೂರು : ಮೊದಲು ಜೆಸಿಬಿ ಕದ್ದು, ಬಳಿಕ ಅದೇ ಜೆಸಿಬಿ ಬಳಸಿ ಕಳ್ಳರು ಎಟಿಎಂ ಎಗರಿಸಲು ಮುಂದಾದ ಘಟನೆ ಸುರತ್ಕಲ್ನ ಇಡ್ಯಾದ ಬಳಿ ನಡೆದಿದೆ.

ನಾಲ್ವರು ಅಂತರಾಜ್ಯ ಕಳ್ಳರು ಈ ಕೃತ್ಯವೆಸಗಿದ್ದು, ಆದರೆ ಅವರ ಯತ್ನ ವಿಫಲವಾಗಿದೆ.
ಎಟಿಎಂ ಕದಿಯಲೆಂದು ಮೊದಲಿಗೆ ಕಳ್ಳರು ಜೆಸಿಬಿ ಕದ್ದಿದ್ದಾರೆ. ಬಳಿಕ ಸೌತ್ ಇಂಡಿಯನ್ ಬ್ಯಾಂಕ್ ಎಟಿಎಂ ಕದಿಯಲು ಜೆಸಿಬಿ ಬಳಸಿದ್ದಾರೆ.

ಕಳ್ಳರು ಜೆಸಿಬಿಯನ್ನು ಪಡುಬಿದ್ರೆಯಲ್ಲಿ ಕದ್ದಿದ್ದಾರೆ. ಬಳಿಕ ಜೆಸಿಬಿಯಲ್ಲಿ ಸುರತ್ಕಲ್ನ ಇಡ್ಯಾದ ಬಳಿ ಬಂದು ಎಟಿಎಂ ಎಗರಿಸಲು ಯತ್ನಿಸಿದ್ದಾರೆ. ಕಳ್ಳರ ಕೈಚಳಕವನ್ನು ಕಂಡು ಸರ್ವಲೆನ್ಸ್ ಸಿಸ್ಟಂ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸುರತ್ಕಲ್ ಠಾಣೆಯ ಪೊಲೀಸರು ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಜೆಸಿಬಿ, 1 ಬೈಕ್, 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.


























