ಪುತ್ತೂರು : ಕೋಡಿಂಬಾಡಿಯಲ್ಲಿ ಮಹಿಳೆಯೊಬ್ಬರು ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಧ್ಯಾಹ್ನ ನಡೆದಿದೆ.
ಕೋಡಿಂಬಾಡಿ ಗ್ರಾಮದ ದರ್ಖಾಸು ನಿವಾಸಿ ಜಯರಾಮ ಗೌಡ ಎಂಬವರ ಪತ್ನಿ ದಿವ್ಯಾ (28) ಎಂಬವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

ಜಯರಾಮ ಗೌಡ ಅವರು ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ಬಜಾಜ್ ಶೋ ರೂಮ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಪತ್ನಿ ಪುತ್ತೂರು ಅರುಣಾ ಚಿತ್ರಮಂದಿರ ಬಳಿಯ ಹೆಲ್ತ್ ಇನ್ಸೂರೆನ್ಸ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆದಿತ್ಯವಾರ ರಜೆಯ ಸಂದರ್ಭ ಜಯರಾಮ ಗೌಡ ಮತ್ತು ಮಕ್ಕಳು ಬೆಳಂದೂರಿನಲ್ಲಿರುವ ತಂಗಿಯ ಮನೆಗೆ ಹೋಗಿದ್ದರು. ಅವರು ಮಧ್ಯಾಹ್ನ ಮನೆಗೆ ಹಿಂದಿರುಗುವಾಗ ಮನೆಯಲ್ಲಿ ದಿವ್ಯಾ ಆತ್ಮಹತ್ಯೆ
ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























