ಪುತ್ತೂರು : ನೆಟ್ಟಣಿಗೆಮುಡ್ನೂರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆ.21 ರಂದು ನಡೆದಿದ್ದು, ಈ ವೇಳೆ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಮತ ಪತ್ರದಲ್ಲಿ ಗೊಂದಲ ಉಂಟಾದ ಘಟನೆ ನಡೆದಿದೆ.

ಉಪಾಧ್ಯಕ್ಷರ ಮತ ಎಣಿಕೆ ಸಂದರ್ಭ ಅಧ್ಯಕ್ಷ ಸ್ಥಾನದ 2 ಮತಪತ್ರ ಕಂಡು ಬಂದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ಆಯ್ಕೆ ಘೋಷಣೆ ಬಾಕಿಯಿದ್ದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೇರೆ ಚುನಾವಣಾಧಿಕಾರಿ ಮೂಲಕ ಚುನಾವಣೆ ನಡೆಸುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸಿ ಹೊರ ಹೋಗಿದ್ದಾರೆ. ಆ ಬಳಿಕ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷರ ಆಯ್ಕೆಯ ಚುನಾವಣೆ ಸರಿಯಾಗಿ ನಡೆದಿದ್ದು, ಘೋಷಣೆ ಮಾತ್ರ ಬಾಕಿ ಇತ್ತು.

























