ಪುತ್ತೂರು : ಯುವತಿಯೋರ್ವಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ಯುವತಿಯನ್ನು ಮಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಯುವತಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗೌರಿ (18) ಮೃತ ಯುವತಿ.
ಪದ್ಮರಾಜ್ ಚೂರಿ ಇರಿದ ಆರೋಪಿ.
ಪುತ್ತೂರಿನ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ಯುವತಿ ಗೌರಿ. ಕೆಲ ಸಮಯಗಳಿಂದ ಗೌರಿ ಮತ್ತು ಪದ್ಮರಾಜ್ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ.
ಪದ್ಮರಾಜ್ ಮತ್ತು ಗೌರಿ ಇಬ್ಬರೂ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದ ಮಾಹಿತಿ, ಇವತ್ತು ಕೂಡ ಪುತ್ತೂರು ಬಸ್ ನಿಲ್ದಾಣದ ಬಳಿ ಮತ್ತೆ ಗಲಾಟೆ ನಡೆದಿದ್ದು, ಪುತ್ತೂರು ಮಹಿಳಾ ಠಾಣೆ ಎದುರೇ ಚೂರಿ ಇರಿದ ಪದ್ಮರಾಜ್ ಪರಾರಿಯಾಗಿದ್ದ.

ಸದ್ಯ ಚೂರಿ ಇರಿದ ಪದ್ಮರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.


























