ವಿಟ್ಲ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೈಕ್ನಲ್ಲಿ ಕರೆದುಕೊಂಡು ಹೋದ ಆರೋಪಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಮ್ಮದ್ ನೌಷಾದ್ ಆರೋಪಿ.
ಬಾಲಕಿಯ ಮನೆಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ಆರೋಪಿ ಮಹಮ್ಮದ್ ನೌಷಾದ್ ವಾಸವಾಗಿದ್ದು, ಶಾಲೆಗೆ ತೆರಳಿದ್ದ ಬಾಲಕಿಯನ್ನು ಪುಸಲಾಯಿಸಿ ವಿಟ್ಲ ಪೇಟೆಯಿಂದ ಉಳ್ಳಾಲ ಬೀಚಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿ ಕೊಡಂಗಾಯಿಯಲ್ಲಿ ಅನುಚಿತವಾಗಿ ವರ್ತಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಿಕ್ಷಕಿಯೋರ್ವರು ಹೆತ್ತವರಲ್ಲಿ ನಿಮ್ಮ ಪುತ್ರಿ ಈ ದಿನ ಶಾಲೆಗೆ ಯಾಕೆ ಬಂದಿಲ್ಲ ಎಂದು ವಿಚಾರಿಸಿದ್ದಾರೆ. ಈ ವೇಳೆ ಬಾಲಕಿಯ ತಾಯಿ ಆಕೆಯ ಸಹಪಾಠಿಗಳಲ್ಲಿ ವಿಚಾರಿಸಿದ್ದರು. ಆಗ ಆಕೆ ಬೈಕ್ನಲ್ಲಿ ತೆರಳಿದ್ದ ಮಾಹಿತಿ ತಿಳಿದು ಬಂದಿತ್ತು.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ..

























