ಧರ್ಮಸ್ಥಳ : ಠಾಣಾ ವ್ಯಾಪ್ತಿಯ ಬೆಳ್ತಂಗಡಿ ಮುಂಡಾಜೆ ಗ್ರಾಮದ ಸೋಮತಡ್ಕ ಎಂಬಲ್ಲಿ ಪ್ರಾವಿಜನ್ ಸ್ಟೋರ್ ನಲ್ಲಿ ನಡೆದ ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಅತ್ತೂರು ಗ್ರಾಮದ ಸುರೇಶ ಕೆ. ಪೂಜಾರಿ (5) ಬಂಧಿತ ಆರೋಪಿ.
ಆರೋಪಿಯು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟಿಯೊಂದನ್ನು ಕಳ್ಳತನ ಮಾಡಿ ಸದ್ರಿ ಸ್ಕೂಟಿಯನ್ನು ಉಪಯೋಗಿಸಿಕೊಂಡು ಕೃತ್ಯವೆಸಗಿದ್ದು, ಸದ್ರಿ ಆರೋಪಿಯು ಸುಮಾರು ಒಂದುವರೆ ತಿಂಗಳಿನಿಂದ ಧರ್ಮಸ್ಥಳ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ನೆರಿಯಾ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ, ವೇಣೂರು ಕಡೆಗಳಲ್ಲಿ ಗೂಡಂಗಡಿಗಳನ್ನು ಸರಣಿ ಕಳವು ಮಾಡಿರುವುದಾಗಿಯೂ ತಿಳಿಸಿರುತ್ತಾನೆ.
ಈತನು ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ ಠಾಣೆ, ಹಿರಿಯಡ್ಕ ಠಾಣೆ, ಪಡುಬಿದ್ರಿ ಠಾಣೆ, ಮುಲ್ಕಿ ಠಾಣೆ, ಹೆಬ್ರಿ ಠಾಣೆ, ಉಡುಪಿ ನಗರ ಠಾಣೆ, ದಾವಣಗೆರೆ ಗ್ರಾಮಾಂತರ ಠಾಣೆ, ಮತ್ತು ಬೆಳಗಾಂ ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು, 2 ತಿಂಗಳು ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಕಳ್ಳತನ ಚಾಳಿ ಮುಂದುವರೆಸಿರುತ್ತಾನೆ ಎಂಬುದು ತಿಳಿದು ಬಂದಿರುತ್ತದೆ.
ಆರೋಪಿತನಿಂದ ರೂ 20,220/- ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು 25000/- ರೂ ಮೌಲ್ಯದ ಸ್ಕೂಟರ್ ವಾಹನ, ಇವುಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

























