ವಿಟ್ಲ : ದಕ್ಷಿಣ ಕನ್ನಡ ಗ್ಯಾರೇಜ್ ಮ್ಹಾಲಕರ ಸಂಘ (ರಿ.) ಮಂಗಳೂರು (ದ.ಕ ಮತ್ತು ಉಡುಪಿ ಜಿಲ್ಲೆ) ವಿಟ್ಲ ವಲಯದ ‘ಮಹಾಸಭೆ ಮತ್ತು ಪದಗ್ರಹಣ ಕಾರ್ಯಕ್ರಮವು ಆ.27 ರಂದು ಭಾರತ್ ಆಡಿಟೋರಿಯಂ ಚಂದಳಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ ನೆರವೇರಿಸಲಿದ್ದಾರೆ.
ಸಭಾಧ್ಯಕ್ಷತೆಯನ್ನು ದ.ಕ ಗ್ಯಾರೇಜ್ ಮ್ಹಾಲಕರ ಸಂಘ, ವಿಟ್ಲ ವಲಯದ ಅಧ್ಯಕ್ಷ ಬಿ.ಕೆ ಬಾಬು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ದ.ಕ ಗ್ಯಾರೇಜ್ ಮಾಲಕರ ಸಂಘದ ಚೇರ್ಮನ್ ಪುಂಡಲೀಕ ಸುವರ್ಣ, ದ.ಕ ಗ್ಯಾರೇಜ್ ಮ್ಹಾಲಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ಧನ ಅತ್ತಾವರ, ದ.ಕ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾಡ್ ಕಿಶೋರ್ ಕೇಶವ, ದೇಲಂತಬೆಟ್ಟು ಚರ್ಚ್ ನ ಧರ್ಮಗುರು ಹಾಗೂ ವಿಟ್ಲದ ಸೈಂಟ್ ರೀಟಾ ಆಂಗ್ಲಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಸುನೀಲ್ ಪ್ರವೀಣ್ ಪಿಂಟೋ, ವಿಟ್ಲದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಂಜೀವ ಪೂಜಾರಿ ಭಾಗವಹಿಸಲಿದ್ದಾರೆ.



























