ಪುತ್ತೂರು : ಭಾರತದ ಯಶಸ್ವಿ ಚಂದ್ರಯಾನ ಸಂಭ್ರಮಾಚರಣೆ ಎಲ್ಲೆಡೆ ಮುಗಿಲುಟ್ಟಿದೆ. ಪುತ್ತಿಲ ಪರಿವಾರ ಚಿಕ್ಕಮುಡ್ನೂರು ಸಮಿತಿಯವರು ಹಲವು ಅಂಗನವಾಡಿ ಹಾಗೂ ಶಾಲೆಗಳಿಗೆ ಸಿಹಿತಿಂಡಿ ಹಂಚಿ ಸಂಭ್ರಮಾಚರಿಸಿದರು.

ಬೀರಿಗ ಅಂಗನವಾಡಿ, ಬನ್ನೂರು ಗುಂಡಿಜಾಲು ಅಂಗನವಾಡಿ, ಕೃಷ್ಣನಗರ ಪ್ರಾಥಮಿಕ ಶಾಲೆ, ಕೃಷ್ಣನಗರ ಅಂಗನವಾಡಿ, ಬೀರ್ನೆಹಿತ್ಲ್ ಪ್ರಾಥಮಿಕ ಶಾಲೆ, ಬಿರ್ನೆತ್ಲ್ ಅಂಗನವಾಡಿ ಪುಟಾಣಿ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಂಚುವುದರೊಂದಿಗೆ ಸಂಭ್ರಮಾಚರಣೆ ಆಚರಿಸಲಾಯಿತು.

ಇದರೊಂದಿಗೆ ನೂತನವಾಗಿ ಆಯ್ಕೆ ಆದ ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ರನ್ನು ಅಭಿನಂದಿಸಿದರು.



























