ಪುತ್ತೂರು : ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಅನೇಕಲ್ ನಲ್ಲಿ ಅಷ್ಟಮಿಯ ಪ್ರಯುಕ್ತ ಕುಣಿತ ಭಜನೆ ಹಾಗೂ ಭಜನೆಗಾಗಿ ನಿರ್ಮಿತವಾದ ಭಕ್ತಿಗೀತೆ ಪುತ್ತೂರು ಜಗದೀಶ್ ಆಚಾರ್ಯ ಸಂಗೀತ ನಿರ್ದೇಶನ ಮಾಡಿ ಗಾಯನ ಮಾಡಿದ ಹಾಗೂ ತುಳುನಾಡಿನ ಹೆಮ್ಮೆಯ ಗಾಯಕಿಯರು ಹಾಡಿರುವ ಬಾರೇ ಸಖಿ ಪೋಗುವ…ಕೊಳಲ ನೂದುವ ಕೃಷ್ಣಾ.. ಅನ್ನುವ ದಾಸರ ಪದ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮ್ಯಾನೇಜಿಂಗ್ ಟ್ರಸ್ಟಿ ಕೃಷ್ಣಾ ನಾಯಕ್, ಪ್ರಧಾನ ಅರ್ಚಕರಾದ ವಿಷ್ಣು ಪ್ರಸಾದ್ ಭಟ್, ಎನ್ ಟಿ ರೈ ಕಾರ್ಯದರ್ಶಿ ಸತ್ಯನಾರಾಯಣ ಭಟ್, ಟ್ರಸ್ಟೀ ವೆಂಕಟ್ ರಾಜ್ ರೈ, ರವೀಂದ್ರ ಶೆಟ್ಟಿ, ಗಿರಿಯಪ್ಪ ನಾಯಕ್ ಹಾಗೂ ಗಾಯಕರಾದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ವಸಂತ್ ಶೆಟ್ಟಿ ಕುಂಟು ಪುಣಿಗುತ್ತು, ಗಾಯಕಿ ಜನ್ಯ ಪ್ರಸಾದ್ ಅನಂತಾಡಿ, ಛಾಯಗ್ರಾಹಕರಾದ ಅರುಣ್ ರೈ ಪುತ್ತೂರು, ಕಲಾವಿದೆ ಚುಕ್ಕಿ ವಿಟ್ಲ, ಕಾರ್ತಿಕ್ ಎನ್.,ಸಚಿನ್ ಇನ್ನಿತರರು ಉಪಸ್ಥಿತರಿದ್ದರು.
























