ವಿಟ್ಲ : ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾರಾನಾಥ ಪೂಜಾರಿ ಬೊಳಿಗದ್ದೆ ರವರು ಕೊಡುಗೆಯಾಗಿ ನೀಡಿದ ಟಿ-ಶರ್ಟ್ ಅನ್ನು ಶಾಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭವಾನಿ ರೈ ಕೊಲ್ಯ ಪದಾಧಿಕಾರಿಗಳಾದ ದೇಜಪ್ಪ ಪೂಜಾರಿ, ಸಂಜೀವ ಪೂಜಾರಿ, ಚಂದ್ರಶೇಖರಗೌಡ ಗಿರಿ ನಿವಾಸ, ಟೀ ಶರ್ಟ್ ಪ್ರಾಯೋಜಕರಾದ ನಮಿತಾ ಮತ್ತು ತಾರನಾಥ ಪೂಜಾರಿ ಬೋಳಿಗದ್ದೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮತಿ ದೇಜಪ್ಪ, ಉಪಾಧ್ಯಕ್ಷ ಮೊಹಮ್ಮದ್ ಜಾಫರ್, ಸದಸ್ಯರಾದ ಕೃಷ್ಣ ಮುದುರು, ರಾಧಿಕಾಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಬಿ ವಿಶ್ವನಾಥಗೌಡ ಕುಳಾಲು ಸ್ವಾಗತಿಸಿದರು. ರೇಷ್ಮಾ ಲೂವೀಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ವಂದಿಸಿದರು.


























