ಬೆಳ್ತಂಗಡಿ/ ಬಂಟ್ವಾಳ : ಸೌಜನ್ಯ ಪ್ರಕರಣ ವಿಚಾರವಾಗಿ ಬೆಳ್ತಂಗಡಿ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ರಾಜ್ ಎಂಬಾತನು ವಾಟ್ಸಾಪ್ ಗ್ರೂಪ್ ಒಂದರಲ್ಲಿ ವೀರೇಂದ್ರ ಹೆಗ್ಡೆ ಮತ್ತು ಅವರ ಕುಟುಂಬದ ಸದಸ್ಯರ ಬಗ್ಗೆ ಅಕ್ಷೇಪಾರ್ಹ ಬರವಣಿಗೆಯನ್ನು ಹಾಕಿರುವುದು ಕಂಡುಬಂದ ಮೇರೆಗೆ ಆ.29 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ ನಂ 79/2023 ಕಲಂ:505(1)(ಬಿ),509 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮತ್ತೊಂದು ಪ್ರಕರಣ :
ರಾಘವೇಂದ್ರ ಭಟ್ ಎಂಬವರು ಸಾಮಾಜಿಕ ಜಾಲತಾಣ (ಫೇಸ್ಬುಕ್) ನಲ್ಲಿ ಧರ್ಮಸ್ಥಳದಲ್ಲಿ ಹತ್ಯೆಯಾದ ಸೌಜನ್ಯಾ ಎಂಬವರ ತಾಯಿಯನ್ನು ಉದ್ದೇಶಿಸಿ ಅಕ್ಷೇಪಾರ್ಹ ಬರವಣಿಗೆಯನ್ನು (ಕಮೆಂಟ್) ಹಾಕಿರುವುದು ಕಂಡುಬಂದ ಮೇರೆಗೆ ಆ.28 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 85/2023 ಕಲಂ: 509 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























