ಸುಳ್ಯ : ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರೊಂದು ಡಿಕ್ಕಿ ಹೊಡೆದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನಪ್ಪ, ರೇಖಪ್ಪ ಮೃತರು.

ಹುಲಿಯಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.31 ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗುವ ಬಗ್ಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಕರಾವಳಿ ಹೊಟೇಲ್ ಬಳಿ ಇರುವ ವಾಣಿಜ್ಯ ಕಟ್ಟಡದ ಎದುರು ಹುಲಿಯಪ್ಪ ಹಾಗೂ ತಮ್ಮೊಂದಿಗೆ ಕಾಮಗಾರಿ ಕೆಲಸಕ್ಕಾಗಿ ಬಂದಿದ್ದ ಸೋಮಪ್ಪ, ಪುಟ್ಟಪ್ಪ , ಚೆನ್ನಪ್ಪ ರೇಖಪ್ಪ , ಮಹಂತಪ್ಪ, ವೆಂಕಪ್ಪ ಎಂಬವರೊಂದಿಗೆ ನಿಂತಿರುವಾಗ ಕಾರೊಂದನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹುಲಿಯಪ್ಪ ರವರ ಜೊತೆಯಲ್ಲಿದ್ದವರಿಗೆ ಕೆಲವರಿಗೆ ಡಿಕ್ಕಿ ಪಡಿಸಿದ್ದು, ಹುಲಿಯಪ್ಪ ನೋಡಿದಾಗ ಚೆನ್ನಪ್ಪ, ರೇಖಪ್ಪ, ಮಹಂತಪ್ಪ, ವೆಂಕಪ್ಪ ರವರಿಗೆ ಕಾರು ಡಿಕ್ಕಿ ಹೊಡೆದಿದ್ದು, ಗಾಯಗೊಂಡಿದ್ದ 4 ಜನರನ್ನು ಹುಲಿಯಪ್ಪ ಹಾಗೂ ಇತರರು ಉಪಚರಿಸಿ ನೋಡಲಾಗಿ ಗಾಯಗೊಂಡವರ ಪೈಕಿ ತಮ್ಮದೇ ಊರಿನವರಾದ ಚೆನ್ನಪ್ಪ, ರೇಖಪ್ಪ ಹಾಗೂ ಮಹಂತಪ್ಪ ರವರು ಗಂಬೀರ ಸ್ವರೂಪದ ಗಾಯಗೊಂಡಿರುತ್ತಾರೆ. ವೆಂಕಪ್ಪರವರಿಗೆ ಸಣ್ಣ-ಪುಟ್ಟ ಗಾಯವಾಗಿರುತ್ತದೆ.
ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಲಾಗಿ ಚೆನ್ನಪ್ಪ ಎಂಬವರು ಮೃತಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ.
ರೇಖಪ್ಪ, ಮಹಂತಪ್ಪ ಎಂಬವರುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ಸಮಯ ರೇಖಪ್ಪ ಎಂಬವರು ಮೃತಪಟ್ಟಿರುತ್ತಾರೆ. ಉಳಿದಂತೆ ಗಂಭಿರವಾಗಿ ಗಾಯಗೊಂಡ ಮಹಂತಪ್ಪ ರವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 96/2023 ಕಲಂ 279, 337, 338, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


























