ವಿಟ್ಲ : ಕೊಡಂಗಾಯಿ ಗ್ರಾಮೀಣ ಅಂಚೆ ಕಚೇರಿಯಲ್ಲಿ ಕಳೆದ 44 ವರ್ಷಗಳಿಂದ ಗ್ರಾಮೀಣ ಅಂಚೆ ನೌಕರರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿರುವ ಕೃಷ್ಣಪ್ಪ ಮಡಿವಾಳ ಕೆ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಪುತ್ತೂರು ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಗಣಪತಿ ಮರಡಿ, ಅಂಚೆ ಕಚೇರಿ ಪಾಲಕರದ ಬಾಲಕೃಷ್ಣ ಎಂ. ಎಲ್ಲಾ ಅಂಚೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

























