ಪುತ್ತೂರು : ವಿದ್ಯಾಭಾರತಿ ಸಂಯೋಜಿತ ಶಾಲೆಗಳ ಪ್ರಾಂತೀಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹನುಮಾನ್ನಗರ, ಕಲ್ಲಡ್ಕ ಇವರ ಆಶ್ರಯದಲ್ಲಿ ಆಫಿಸರ್ಸ್ ಕ್ಲಬ್ ಪುತ್ತೂರಿನಲ್ಲಿ ನಡೆಯಿತು.

ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡ ಬಾಲವರ್ಗದ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯಾರ್ಥಿಗಳ ವಿವರ:
ಆದ್ಯತ್.ಆರ್: 6 ನೇ ತರಗತಿ ( ಎ.ರಂಜಿತ್ ಮತ್ತು ವತ್ಸಲಾ ದಂಪತಿ ಪುತ್ರ), ಇಶಾನ್..ಕೆ, 7 ನೇ ತರಗತಿ ( ನಾರಾಯಣ ಮೂರ್ತಿ.ಕೆ ಮತ್ತು ಪ್ರೇಮಲತ ದಂಪತಿ ಪುತ್ರ), ಜಶ್.ಎಚ್.ಬಿ, 6 ನೇ ತರಗತಿ ( ಹೇಮಚಂದ್ರ.ಬಿ ಮತ್ತು ಶುಭಶ್ರೀ.ಹೆಚ್ ದಂಪತಿ ಪುತ್ರ), ಹಿತನ್ ಕುಮಾರ್, 7 ನೇ ತರಗತಿ ( ಉದಯ ಕುಮಾರ್ ಮತ್ತು ಲಲಿತಾ ದಂಪತಿ ಪುತ್ರ)




























