ವಿಟ್ಲ : ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕ್ಕೇರಿಯಲ್ಲಿ ನೂತನವಾಗಿ ಪ್ರಾರಂಭಿಸುವ ಸಾಯಿ ಗಣೇಶ್ ಆಟೋ ಗ್ಯಾಸ್, AEGIS LOGISTICS Ltd ಉದ್ಘಾಟನಾ ಸಮಾರಂಭ ಸೆ.8 ರಂದು ನಡೆಯಲಿದೆ.
ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಯಸ್. ಕೃಷ್ಣ ಭಟ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಲಿದ್ದಾರೆ.
Aegis Logistics Ltd. ಜನರಲ್ ಮ್ಯಾನೇಜರ್ ಸುಕೇಶ್ ಕುಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಟ್ಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ನಾಗರಾಜ್ ಎಚ್.ಇ., ವಿಟ್ಲ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಗೋಪಾಲ ನಾಯ್ಕ್, ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರಾದ ಯನ್.ಕೆ ಮಹಾಭಲೇಶ್ವರ ಭಟ್, ವಿಟ್ಲದ ಉದ್ಯಮಿಗಳಾದ ಎಂ. ನಿತ್ಯಾನಂದ ನಾಯಕ್, ವಿಟ್ಲ ಮೇಗಿನಪೇಟೆಯ ಹೊರಿಝನ್ ಪಬ್ಲಿಕ್ ಸ್ಕೂಲ್ ನ ಸಂಚಾಲಕರಾದ ಮೊಹಮ್ಮದ್ ಇಕ್ಬಾಲ್ ಹಾನೆಶ್ಟ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಎಚ್., ಬಿ.ಎಂ.ಎಸ್. ಆಟೋ ಮಾಲಕರ ಸಂಘದ ಅಧ್ಯಕ್ಷರಾದ ಎನ್. ವಸಂತ್ ಶಿವಾಜಿನಗರ, ಫೆಡರೇಷನ್ ಆಫ್ ಆಟೋ ರಿಕ್ಷಾ ಯೂನಿಯನ್ (c.i.t.u) ಅಧ್ಯಕ್ಷರಾದ ರಮೇಶ್ ಶಿವಾಜಿನಗರ, ಹಿರಿಯ ರಿಕ್ಷಾ ಚಾಲಕರಾದ ಆರಂಗಳ ಇಸುಫ್ ಕುಳಾಲು ಆಗಮಿಸಲಿದ್ದಾರೆ..



























