ಪುತ್ತೂರು : ಮುಂಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಜಯಗುರು ಆಚಾರ್ ರವರಿಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ 2022-23ನೇ ಸಾಲಿನ ಒಕ್ಕೂಟದ ‘ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಜಯಗುರು ಆಚಾರ್ ರವರು ನರಿಮೊಗರು ಸಾಂದೀಪನಿ ಶಾಲೆಯ ಸಂಚಾಲಕರಾದ, ಮುಂಡೂರಿನ ಹಿಂದಾರು ನಿವಾಸಿ ಭಾಸ್ಕರ್ ಆಚಾರ್ ಹಿಂದಾರು ಹಾಗೂ ಸುಜಾತ ಆಚಾರ್ ಹಿಂದಾರು ದಂಪತಿಗಳ ಪುತ್ರ.
ಜಯಗುರು ಆಚಾರ್ ಅವರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಬಳಿಕ ಖಾಸಗಿ ಸಂಸ್ಥೆಯೊಂದರಲ್ಲಿ ಒಂದು ವರ್ಷ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದು, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.
ರೋಟರಿ ಹಾಗೂ ಇತರ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕಾರ್ಯಕ್ರಮದಲ್ಲಿ ‘ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಹಿಂದಾರು ಉಪಸ್ಥಿತರಿದ್ದರು.