ಪುತ್ತೂರು : ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪುತ್ತಿಲ ಪರಿವಾರದ ವತಿಯಿಂದ ಐವರು ಶಿಕ್ಷಕರ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಫಿಲೋಮಿನಾ ಹೈಸ್ಕೂಲಿನ ನಿವೃತ್ತ ಶಿಕ್ಷಕರಾದ ಸುರೇಶ್ ಶೆಟ್ಟಿ , ಕೊಂಬೆಟ್ಟು ಹಾಸ್ಟೇಲ್ ವಾರ್ಡನ್ ಆಗಿ ನಿವೃತ್ತರಾದ ಕೆ.ಮೋಹಿನಿ ರಾಮಚಂದ್ರ ಭಟ್, ಪುತ್ತೂರು ರಾಮಕೃಷ್ಣ ಶಾಲಾ ನಿವೃತ್ತ ಮುಖ್ಯಶಿಕ್ಷಕಿ ರೂಪಕಲಾ ಶೆಟ್ಟಿ ಕೆ, ಕುಂಬ್ರದ ಶಾಲಾ ಶಿಕ್ಷಕಿ ರೇವತಿ, ಬಾಳಿಲ ವಿದ್ಯಾಬೋಧಿನಿ ಶಾಲಾ ಪ್ರಶಸ್ತಿ ವಿಜೇತ ಉದಯ ಕುಮಾರ್ ರೈ ಯವರನ್ನು ಸನ್ಮಾನಿಸಲಾಯಿತು.


ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಭೀಮ್ ಭಟ್ , ಪ್ರವೀಣ್ ಪಾಂಗಳಾಯಿ ಹಾಗೂ ಇತರರು ಉಪಸ್ಥಿತರಿದ್ದರು.

