ಪುತ್ತೂರು : ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಘಟನೆ ಬಡಗನ್ನೂರಿನಲ್ಲಿ ನಡೆದಿದೆ.

ಬಡಗನ್ನೂರು ಕುಡ್ಕಾಡಿ ನಿವಾಸಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಯಿಂದ ಚಿನ್ನಾಭರಣವನ್ನು ದೋಚಿದ್ದಾರೆನ್ನಲಾಗಿದೆ.
ಗುರುಪ್ರಸಾದ್ ರೈ ಹಾಗೂ ಅವರ ತಾಯಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಕಳ್ಳತನ ಮಾಡಿದ್ದಾರೆನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
























