ವಿಟ್ಲ : ಕೆಂಪು ಕಲ್ಲು ಹಾಕಿದ ವಿಚಾರಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲದಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರುವಾಯಿ ನಿವಾಸಿ ಜೋಸ್ ಜೋಸೇಫ್ ನೀಡಿದ ದೂರಿನಂತೆ ಸತೀಶ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೋಸೇಫ್ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಮುಕುಡಾಪು ಎಂಬಲ್ಲಿಗೆ ಲಾರಿಯಲ್ಲಿ ಕೆಂಪು ಕಲ್ಲು ತೆಗೆದುಕೊಂಡು ಬಂದಿದ್ದನ್ನು ನೋಡಿದ ಸತೀಶ್ ಎಂಬವರು ಜೋಸೇಫ್ ಕಾಂಪೌಂಡಿನ ಒಳಗೆ ಬಂದು ನನ್ನನ್ನು ಬಿಟ್ಟು ಬೇರೆಯವರಿಂದ ಕೆಂಪು ಕಲ್ಲು ಹಾಕಿಸುತ್ತೀಯಾ ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಲ್ಲದೆ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ: 324,504,506 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























