ಪುತ್ತೂರು : ಬಡಗನ್ನೂರು ಕುದ್ಕಾಡಿ ಗುರುಪ್ರಸಾದ್ ರೈ ಯವರ ಮನೆಯಲ್ಲಿ ಮುಸುಕುದಾರಿಗಳ ತಂಡದಿಂದ ಹಣ ಚಿನ್ನಾಭರಣ ದರೋಡೆ ನಡೆದಿದ್ದು, ಸ್ಥಳಕ್ಕೆ ಪುತ್ತಿಲ ಪರಿವಾರದವರು ಭೇಟಿ ನೀಡಿದರು.

ದರೋಡೆಕೋರರು ಮನೆಯಲ್ಲಿ ಕೈಗೆ ಸಿಕ್ಕಿದ ವಸ್ತುಗಳನ್ನು ಚೆಲ್ಲಾಡಿದ್ದು, ದರೋಡೆ ಪ್ರಕರಣ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಘಟನಾ ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪದಾಧಿಕಾರಿಗಳು ಭೇಟಿ ನೀಡಿದರು.

ಗುರುಪ್ರಸಾದ್ ರೈ ಹಾಗೂ ತಾಯಿ ಜೊತೆ ಮಾತು-ಕತೆ ನಡೆಸಿದರು.

ಪುತ್ತೂರಿನ ಗ್ರಾಮಾಂತರ ಭಾಗದಲ್ಲಿ ಹಲವು ಕಡೆ ರಾತ್ರಿ ದರೋಡೆ ನಡೆಯುತ್ತಿದ್ದು, ಪೊಲೀಸರು ಗ್ರಾಮಾಂತರ ಭಾಗದಲ್ಲಿ ರಾತ್ರಿ ಬೀಟ್ ವ್ಯವಸ್ಥೆ ಮಾಡಿ ಜನಸಾಮಾನ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಈ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂಬುದು ಪುತ್ತಿಲ ಪರಿವಾರ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
