ಪುತ್ತೂರು : ಹಿರಿಯ ಕಾಂಗ್ರೆಸ್ ಮುಖಂಡ, ಕಿಲ್ಲೆ ಮೈದಾನದ ದೇವತಾ ಸಮಿತಿ ಅಧ್ಯಕ್ಷ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್. ಸುಧಾಕರ್ ಶೆಟ್ಟಿಯವರು ಸೆ.10 ರಂದು ರಾತ್ರಿ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ನಿಧನರಾದರು.

ಎನ್.ಸುಧಾಕರ್ ಶೆಟ್ಟಿಯವರ ಮೃತದೇಹವನ್ನು ಸೆ.11 ರಂದು ಪುತ್ತೂರು ನೆಲ್ಲಿಕಟ್ಟೆ ಮನೆಗೆ ತರಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.























