ಉಪ್ಪಿನಂಗಡಿ : ತಂಡವೊಂದು ವ್ಯಕ್ತಿಯೋರ್ವರಿಗೆ ಸೇರಿದ ಕಟ್ಟಡಕ್ಕೆ ಹಾನಿ ಉಂಟು ಮಾಡಿದ್ದು, ಈ ಬಗ್ಗೆ ವಿರೋಧಿಸಿದಾಗ ಜೀವ ಬೆದರಿಕೆ ಹಾಕಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಕ್ಕಿಲಾಡಿ ನಿವಾಸಿ ಜಗಜೀವನ್ ರೈ ಎಂಬವರು ನೀಡಿದ ದೂರಿನ ಮೇರೆಗೆ ಸುದರ್ಶನ್, ತಿಮ್ಮಪ್ಪ ಗೌಡ, ವಸಂತ ಕುಂಟನಿ, ರವಿನಂದನ್ ಹೆಗ್ಡೆ, ನಾಗರಾಜ, ಶರೀಫ್ ಹಾಗೂ ಇತರರು ವಿರುದ್ಧ ಪ್ರಕರಣ ದಾಖಲಾಗಿದೆ.
ಜಗಜೀವನ ರೈ ಎಂಬವರಿಗೆ ಸೇರಿದ ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿದ ಸುದರ್ಶನ್, ತಿಮ್ಮಪ್ಪ ಗೌಡ, ವಸಂತ ಕುಂಟನಿ, ರವಿನಂದನ್ ಹೆಗ್ಡೆ, ನಾಗರಾಜ, ಶರೀಫ್ ಹಾಗೂ ಇತರರ ತಂಡವು ಮೂರು ಕಂಬಗಳನ್ನು ಬೀಳಿಸಿ, ಕಟ್ಟಡದ ಹಂಚುಗಳಿಗೆ ಹಾನಿ ಮಾಡಿ, ಕಟ್ಟಡದ ಒಳಗೆ ಮಳೆ ನೀರು ಬೀಳುವಂತೆ ಮಾಡಿ ನಷ್ಟ ಉಂಟು ಮಾಡಿದ್ದು, ಈ ಬಗ್ಗೆ ಆರೋಪಿತರ ಕೃತ್ಯವನ್ನು ವಿರೋಧಿಸಿದಾಗ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ ; 124/2023 ಕಲಂ: 143.147.448.427.506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























