ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ಮಾಡಲಾಗಿದ್ದು, ಸಾಕಷ್ಟು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರು ಯೆಲ್ಲೋ ಬೋರ್ಡ್ ಇರುವ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಬಂದ್ ಬಿಸಿ ಸ್ಪಿನ್ ಮಾಂತ್ರಿಕ, ಮಾಜಿ ಕ್ರಿಕೆಟರ್ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೂ ತಟ್ಟಿದೆ.
ಭಾರತದ ಕ್ರಿಕೆಟ್ ತಂಡದ ದಿಗ್ಗಜ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆಯವರು ಇಂದು ವಿಮಾನದ ಮೂಲಕ ಬೆಂಗಳೂರಿನ ಏರ್ಪೋರ್ಟ್ಗೆ ಆಗಮಿಸಿದ್ದಾರೆ. ಈ ವೇಳೆ ಏರ್ಪೋರ್ಟ್ನಿಂದ ತಮ್ಮ ನಿವಾಸಕ್ಕೆ ಹೋಗಬೇಕೆಂದು ಕ್ಯಾಬ್ಗಳನ್ನ ಹುಡುಕಾಡಿದ್ದಾರೆ. ಆದ್ರೆ ಯಾವುದೇ ಕ್ಯಾಬ್ ಸಿಕ್ಕಿಲ್ಲ. ಹೀಗಾಗಿ ಅನಿಲ್ ಕುಂಬ್ಳೆ ಅವರು ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಿದ್ದಾರೆ.
ಸದ್ಯ ಈ ಬಗ್ಗೆ ತಮ್ಮ X ಅಕೌಂಟ್ನಲ್ಲಿ ಫೋಟೋ ಶೇರ್ ಮಾಡಿರುವ ಅನಿಲ್ ಕುಂಬ್ಳೆಯವರು, ಇಂದು ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್ ಮೂಲಕ ಮನೆಗೆ ವಾಪಸ್ ಆಗುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಬಿಎಂಟಿಸಿ ಕಂಡಕ್ಟರ್ಗೆ ಸೆಲ್ಫಿ ಕೊಟ್ಟಿದ್ದು, ಅನಿಲ್ ಕುಂಬ್ಳೆ ಅವರ ಸರಳತೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
BMTC trip back home today from the airport. pic.twitter.com/jUTfHk1HrE
— Anil Kumble (@anilkumble1074) September 11, 2023

























