ಸುಳ್ಯ : ವಿಟ್ಲದಿಂದ ಚಾಮರಾಜನಗರಕ್ಕೆ ಲಾರಿಯಲ್ಲಿ ಹತ್ತಕ್ಕೂ ಹೆಚ್ಚು ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಲಾರಿಯನ್ನು ತಡೆದು ತಪಾಸಣೆ ನಡೆಸಿದ ಘಟನೆ ಜಾಲ್ಸೂರು ಪೆಟ್ರೋಲ್ ಪಂಪ್ ಬಳಿ ನಡೆದಿದೆ.

ತಪಾಸಣೆ ನಡೆಸಿದ ವೇಳೆ ದನ ಸಾಗಾಟಕ್ಕೆ ಅಗತ್ಯ ದಾಖಲೆಪತ್ರ ದೊರಕಿದ್ದು, ಈ ಹಿನ್ನೆಲೆ ಪೊಲೀಸರು ತಪಾಸಣೆ ನಡೆಸಿ ಬಳಿಕ ಲಾರಿಯನ್ನು ಕಳುಹಿಸಿಕೊಟ್ಟ ಬಗ್ಗೆ ವರದಿಯಾಗಿದೆ.
ವಿಟ್ಲದಿಂದ ಚಾಮರಾಜನಗರಕ್ಕೆ ಎರಡು ಲಾರಿಯಲ್ಲಿ ಹತ್ತಕ್ಕೂ ಅಧಿಕ ದನಗಳನ್ನು ಸಾಗಿಸುತ್ತಿದ್ದು, ದಾಖಲೆಪತ್ರಗಳಿದ್ದರೂ ಚಾಲಕರು ತಡವಾಗಿ ರಾತ್ರಿಯವೇಳೆ ಸಾಗಿಸುತ್ತಿದ್ದಾರೆಂದು ಸ್ಥಳೀಯರು ಆಕ್ಷೇಪಿಸಿದ್ದು, ಸುಳ್ಯ ಪೊಲೀಸರು ತಪಾಸಣೆ ನಡೆಸಿದಾಗ ದಾಖಲೆಪತ್ರ ಇದ್ದ ಕಾರಣದಿಂದ ಎರಡೂ ಲಾರಿಯನ್ನು ಹೋಗಲು ಬಿಟ್ಟಿರುವುದಾಗಿ ತಿಳಿದು ಬಂದಿದೆ..


























