ವಿಟ್ಲ : ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023ನೇ ಸಾಲಿನ ಜೇಸಿ ಸಪ್ತಾಹ ‘ ಜೈತ್ರ ‘ 3ನೇ ದಿನದ ಕಾರ್ಯಕ್ರಮದ ಅಂಗವಾಗಿ ಪೋಕ್ಸೋ ಕಾಯಿದೆ, ಮಾದಕ ವಸ್ತುಗಳ ವಿರೋಧಿ ಜಾಗೃತಿ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ನಾಗರಾಜ ಹೆಚ್.ಇ ನೆರವೇರಿಸಿ ಸಂಚಾರಿ ರಸ್ತೆ ಸುರಕ್ಷತೆ, ಡ್ರಗ್ಸ್ ಚಟದಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳು, ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು JFP ಪರಮೇಶ್ವರ ಹೆಗಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಜೆಸಿ ಡಿ. ಶ್ರೀಧರ ಶೆಟ್ಟಿ, ಜೊತೆ ಕಾರ್ಯದರ್ಶಿ JC.HGF ಪ್ರಕಾಶ್ ಕುಕ್ಕಿಲ, ಪ್ರಾಂಶುಪಾಲ ಜಯರಾಮ ರೈ ಭಾಗವಹಿಸಿದ್ದರು.
ಪ್ರೌಢ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಮಾಹಿತಿಯನ್ನು ಪಡೆದುಕೊಂಡರು. JC. HGF. ಹೇಮಲತಾ ಜೈಕಿಶನ್ ಜೇಸಿ ವಾಣಿಯನ್ನು ಓದಿದರು. ಜೇಸಿ ಸಪ್ತಾಹ ನಿರ್ದೇಶಕ ರಿತೇಶ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.


























