ಕಾಣಿಯೂರು: ಚಾರ್ವಾಕ ಪರಿಸರದಲ್ಲಿ ಕೊರೋನಾ ಪಾಸಿಟಿವ್ ಆಗಿ ಹೊರಗೆ ಬರಲಾಗದೆ ಮನೆಯಲ್ಲಿ ಕ್ವಾರಂಟೈನ್ ಆಗಿರುವ ಮನೆಯಲ್ಲಿರುವ ಗೋವುಗಳಿಗೆ ಹುಲ್ಲಿನ ಅಭಾವ ಉಂಟಾದರಿಂದ ಅಲ್ಲಿಗೆ ಬೇಕಾದ ಹಸಿರು ಹುಲ್ಲನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಚಾರ್ವಾಕದ ಕಾರ್ಯಕರ್ತರು ಸಂಗ್ರಹಿಸಿ ಮನೆಗೆ ನೀಡಿದರು.
ಅಲ್ಲದೆ ಮುದುವ ಪರಿಸರದಲ್ಲಿ ಸಾವಿಗೀಡಾದ ಗೋವಿನ ಅಂತ್ಯಸಂಸ್ಕಾರವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಮಾಡಿದರು.ವಿಶ್ವಹಿಂದು ಪರಿಷತ್ ನ ಅಧ್ಯಕ್ಷ ರು ಸತ್ಯನಾರಾಯಣ ಕಲ್ಲುರಾಯ, ಕಾರ್ಯದರ್ಶಿ ಪ್ರಕಾಶ್ ಮುದುವ,ಬಜರಂಗದಳ ಸಂಚಾಲಕರು ನಯನ್ ಕಲಾಯಿ ಹಾಗೂ ಬೆಳಂದೂರು ವಲಯ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಂದನ್ ಕಜೆ ಮತ್ತಿತರರು ಉಪಸ್ಥಿತರಿದ್ದರು.