ಪುತ್ತೂರು : ಮನೆ ಕಳವು ಮಾಡಿದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ತಿಗೆ ನಿವಾಸಿ ಹರೀಶ ಆಚಾರ್ಯ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಜೆಯ ಅವಧಿಯಲ್ಲಿ ಯಾರೋ ಕಳ್ಳರು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕಂಟ್ರಮಜಲು ಎಂಬಲ್ಲಿರುವ ಮನೆಯ ಬಾಗಿಲಿನ ಬೀಗವನ್ನು ಒಡೆದು, ಮನೆಯಲ್ಲಿದ್ದ ನಗದು ಹಣ 4,000 ರೂ. ಹಾಗೂ ಬೆಳ್ಳಿ,ತಾಮ್ರ, ಹಿತ್ತಾಳೆಯ ವಿವಿಧ ಪೂಜಾ ಪರಿಕರಗಳು ಸೇರಿದಂತೆ ಒಟ್ಟು ರೂ 31,350 / -ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 61/2023 ಕಲಂ 454,457,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























