ಉಪ್ಪಿನಂಗಡಿ : ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿ ಕೆಡವಿದ್ದು, ಈ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ ಬಗ್ಗೆ ವರದಿಯಾಗಿದೆ.
ಉಪ್ಪಿನಂಗಡಿ ನಿವಾಸಿ ಸುದರ್ಶನ ನೀಡಿದ ದೂರಿನ ಮೇರೆಗೆ ಜಗಜೀವನ ರೈ, ಭವಿಷ್ಯ ಜೆ. ರೈ, ಸಂದೀಪ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುದರ್ಶನ ಎಂಬವರಿಗೆ ಸೇರಿದ ಕಟ್ಟಡಕ್ಕೆ ಜಗಜೀವನ ರೈ, ಭವಿಷ್ಯ ಜೆ. ರೈ, ಸಂದೀಪ್ ಹಾಗೂ ಇತರರು ಅಕ್ರಮ ಪ್ರವೇಶ ಮಾಡಿ ಕಟ್ಟಡವನ್ನು ಕೆಡವುತ್ತಿರುವ ಬಗ್ಗೆ ಮಾಹಿತಿ ತಿಳಿದ ಸುದರ್ಶನ್ ಕಟ್ಟಡ ಕೆಡವುದನ್ನು ನಿಲ್ಲಿಸಬೇಕೆಂದು ಸೂಚಿಸಿದಾಗ ಜಗಜೀವನ್ ರೈ, ಅವರ ಮಗ ಭವಿಷ್ಯ ಜೆ. ರೈ ಹಾಗೂ ಅವರ ಜೊತೆಯಲ್ಲಿದ್ದವರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿರುವುದಲ್ಲದೆ, ಸೆ.10 ರಾತ್ರಿ ಆರೋಪಿತರು ಅಂಗಡಿ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ ;125/2023 ಕಲಂ: 448,427,504,506 R/w 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























