ಪುತ್ತೂರು : ಆರ್ಯಾಪು ಸಹಕಾರಿ ಸಂಘವು ಕಳೆದ ಹಲವಾರು ವರ್ಷಗಳಿಂದ ಸಂಪ್ಯ, ಒಳತಡ್ಕ, ಕುರಿಯ ದಲ್ಲಿ ಗ್ರಾಮದ ಜನರಿಗೆ ಉತ್ತಮ ರೀತಿ ಯಲ್ಲಿ ಪಡಿತರ (ರೇಷನ್)ವಿತರಣೆ ಮಾಡುತ್ತಿರುವುದು ಒಂದು ಅಭಿನಂದನಾರ್ಹ ಕೆಲಸ ಎಂದು ಆರ್ಯಾಪು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಸರಸ್ವತಿಯವರು ಹೇಳಿದರು.
ಅವರು ಸಹಕಾರಿ ಸಂಘದ ವತಿಯಿಂದ ನಡೆಯುತ್ತಿದ್ದ ಒಳತಡ್ಕ ರೇಷನ್ ಅಂಗಡಿಯನ್ನು ಕುಂಜೂರು ಪಂಜಕ್ಕೆ ಸ್ಥಳಾಂತರಿಸುವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಸಹಕಾರಿ ಸಂಘದ ಕೋರಿಕೆಯಂತೆ ರೇಷನ್ ವ್ಯವಸ್ಥೆಗೆ ಪಂಚಾಯತ್ ನ ಕಟ್ಟಡವನ್ನು ಒದಗಿಸಿರುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆರ್ಯಾಪು ಸಹಕಾರಿ ಸಂಘದ ಅಧ್ಯಕ್ಷ ರಾದ ಎಚ್. ಮಹಮ್ಮದ್ ಅಲಿ ಯವರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಒಳತಡ್ಕದ ಖಾಸಗಿ ಬಾಡಿಗೆ ಕಟ್ಟಡ ಒ0ದರಲ್ಲಿ ರೇಷನ್ ವಿತರಣೆ ವ್ಯವಸ್ಥೆ ನಡೆಯುತ್ತಿತ್ತು ಇತ್ತೀಚೆಗೆ ಈ ಖಾಸಗಿ ಕಟ್ಟಡದ ನಾದುರಸ್ಥಿಯಲ್ಲಿದ್ದು, ಇಲ್ಲಿ ವಿಪರೀತ ಗೆದ್ದಲಿನಿಂದ ಹಾಗೂ ಇಲಿಗಳ ಉಪಟಳದಿಂದ ಸರಕಾರದ ರೇಷನ್ ಅಕ್ಕಿಗಳು ಹಾಳಾಗುತ್ತಿದ್ದು , ಇದನ್ನು ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿ ಈ ಸಮಸ್ಯೆಯಿಂದ ಪಾರಾಗಳು ಈ ರೇಷನ್ ಅಂಗಡಿಯನ್ನು ಸ್ಥಳಾಂತರಿಸುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ ಅಲಿ ಯವರು ಜನರಿಗೆ ಸಮರ್ಪಕ ರೇಷನ್ ವಿತರಣೆ ಮಾಡುವ ಜವಾಬ್ದಾರಿ ನಮ್ಮ ದಾಗಿದ್ದು, ಈಗ ತಾತ್ಕಾಲಿಕವಾಗಿ ಕುಂಜೂರು ಪಂಜದಲ್ಲಿ ರೇಷನ್ ಅಂಗಡಿ ತೆರೆಯಲಾಗಿದೆ ಮುಂದೆ ಒಳತಡ್ಕದಲ್ಲಿ ಸೂಕ್ತ ಕಟ್ಟಡ ಒದಗಿಸಿ ಕೊಟ್ಟಲ್ಲಿ ಅಲ್ಲಿ ರೇಷನ್ ಅಂಗಡಿ ತೆರೆಯುವರೇ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು, ನಮ್ಮ ಸಹಕಾರಿ ಸಂಘದ ವತಿಯಿಂದ ಸಮರ್ಪಕ ರೇಷನ್ ವಿತರಣೆ ವ್ಯವಸ್ಥೆ ಕೈಗೊಳ್ಳಲು 3 ಜನ ಪೂರ್ಣಕಾಲಿಕ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ರೇಷನ್ ವಿತರಣೆ ವ್ಯವಸ್ಥೆಯು ಸಹಕಾರಿ ಸಂಘಕ್ಕೆ ಲಾಭದಾಯಕ ವಾಗಿರುವುದಿಲ್ಲ, ಸಿಬ್ಬಂದಿಗಳ ವೇತನ, ಕಟ್ಟಡದ ಬಾಡಿಗೆ ಇನ್ನಿತರ ಖರ್ಚುಗಳ ನ್ನು ಲೆಕ್ಕ ಹಾಕಿದಲ್ಲಿ ಸಹಕಾರಿ ಸಂಘಕ್ಕೆ ವಾರ್ಷಿಕ ರೂ 5 ಲಕ್ಷದಷ್ಟು ಹೆಚ್ಚಿನ ಹೊರೆ ಬೀಳುತ್ತದೆ ಆದರೂ ಜನರ ಹಿತದೃಷ್ಟಿಯಿಂದ ಸೇವಾ ಮನೋಭಾವನೆ ಇಟ್ಟುಕೊಂಡು ಸಹಕಾರಿ ಸಂಘಕ್ಕೆ ನಷ್ಟವಾದರೂ ರೇಷನ್ ವಿತರಣೆ ವ್ಯವಸ್ಥೆಯನ್ನು ಮುಂದುವರಿಸಿ ಕೊಂಡು ಬಂದಿರುತ್ತೇವೆ, ಹಾಗಿದ್ದು ನಮ್ಮ ಕೋರಿಕೆಯಂತೆ ತಕ್ಷಣ ಕಟ್ಟಡ ಒದಗಿಸಲು ಪ್ರಯತ್ನಿಸಿರುವ ಸ್ಥಳೀಯ ಪಂಚಾಯತ್ ಸದಸ್ಯರಾದ ವಸಂತ ಶ್ರೀ ದುರ್ಗ, ಸಹಕಾರಿ ಸಂಘದ ನಿರ್ದೇಶಕರಾದ ತಿಮ್ಮಪ್ಪ ನಾಯ್ಕ್ ಜಂಗಮುಗೇರು, ಮತ್ತು ಪಂಚಾಯತ್ ಆಡಳಿತಕ್ಕೆ ಹಾಗೂ ಈ ಕಟ್ಟಡದ ಸುತ್ತ ಮುತ್ತ ಶ್ರಮದಾನ ಮಾಡಿ ಸ್ವಚ್ಛ ಗೊಳಿಸಿರುವ ಸ್ಥಳೀಯ ನಾಗರಿಕರಿಕರಿಗೆ ಈ ಸಂದರ್ಭದಲ್ಲಿ ನಮ್ಮ ಸಹಕಾರಿ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಲಿಯವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ನ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ವಸಂತ ಶ್ರೀ ದುರ್ಗ, ಸಹಕಾರಿ ಸಂಘ ದ ನಿರ್ದೇಶಕರಾದ ತಿಮ್ಮಪ್ಪ ನಾಯ್ಕ್, ಮಾಜಿ ನಿರ್ದೇಶಕರಾದ ಎನ್. ಗೋಪಾಲ ಭಟ್ ಶುಭಹಾರೈಸಿದರು, ವೇದಿಕೆಯಲ್ಲಿ ಪಂಚಾಯತ್ ಪಂಚಾಯತ್ ಸದಸ್ಯೆ ಗೀತಾ, ಮಾಜಿ ಸದಸ್ಯರಾದ ಸೂರ್ಯನಾರಾಯಣ ಪ್ರಭು, ಪತ್ರಕರ್ತ ಸಂಶುದ್ದೀನ್ ಸಂಪ್ಯ ಉಪಸ್ಥಿತರಿದ್ದರು. ಸಹಕಾರಿ ಸಂಘದ ಸಿಬ್ಬಂದಿ ಉಮೇಶ್ ಸ್ವಾಗತಿಸಿ, ವಂದಿಸಿದರು.