ಬಂಟ್ವಾಳ : ಬೈಪಾಸಿನಲ್ಲಿ ನಿರ್ಮಾಣಗೊಂಡ ನೂತನ ರಿಕ್ಷಾ ತಂಗುದಾಣವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಸೆ.13 ರಂದು ಉದ್ಘಾಟನೆ ಮಾಡಿದರು.

ಬಂಟ್ವಾಳದ ಬೈಪಾಸಿನ ರಿಕ್ಷಾ ತಂಗುದಾಣ ನಿರ್ಮಾಣ ರಿಕ್ಷಾ ಚಾಲಕರ ಬಹುದಿನದ ಬೇಡಿಕೆಯಾಗಿತ್ತು.

ಅವರ ಬೇಡಿಕೆಯಯಂತೆ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಅವಿರತ ಪ್ರಯತ್ನದಿಂದ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ರವರ 2019 -2020ನೇ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಂಡಿದೆ.




























