ವಿಟ್ಲ : ಕೆಲ ದಿನಗಳ ಅನಾರೋಗ್ಯದಿಂದಾಗಿ ಕಾಶಿಮಠ ಕಬ್ಬಿನಹಿತ್ಲು ನಿವಾಸಿ ಚಂದ್ರಶೇಖರ ಪುರುಷ (65) ನಿಧನರಾದರು.
ಚಂದ್ರಶೇಖರ ಪುರುಷ ರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದು, ಬಿಜೆಪಿಯ ಕಾರ್ಯಕರ್ತರಾಗಿದ್ದು ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕೇಪು ದೈವಸ್ಥಾನದಿಂದ ಭಂಡಾರ ಬರುವ ಸಂದರ್ಭದಲ್ಲಿ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ದೈವಕ್ಕೆ ಸಂಬಂಧಿಸಿದ ವಸ್ತುಗಳ ಹೊಲಿಗೆಯಲ್ಲಿ ಪರಿಣಿತ ಹೊಂದಿದ್ದ ಇವರು ಕೇರಳ ಹಾಗೂ ಕರ್ನಾಟಕದ ಐದು ದೇವಾಲಯಗಳ ಗರುಡದ ನಿರ್ಮಾಣವನ್ನು ಮಾಡಿದ್ದರು.
ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.


























