ವಿಟ್ಲ : ಹಾಲು ಉತ್ಪಾದಕ ಸಂಘದ ವಿಚಾರವಾಗಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲಮೂಡ್ನೂರು ನಿವಾಸಿ ಎನ್. ಗೋವಿಂದ ನಾಯ್ಕ್ ಎಂಬವರು ನೀಡಿದ ದೂರಿನ ಮೇರೆಗೆ ಜಯಪ್ರಕಾಶ್ ನಾಯಕ್ ಮತ್ತು ಭೋಜ ಎಂಬವರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್, ಗೋವೀಂದ ನಾಯ್ಕ್ ಎಂಬವರು ಕೇಪು ಗ್ರಾಮದ ದೇವುಮೂಲೆ ಎಂಬಲ್ಲಿರುವ ತೋಟಕ್ಕೆ ಹೋಗುವರೇ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ನಾಟೆಕಲ್ಲು ಎಂಬಲ್ಲಿಗೆ ದ್ವಿಚಕ್ರ ವಾಹನದಲ್ಲಿ ತಲುಪಿದಾಗ ಅಲ್ಲಿದ್ದ ಜಯಪ್ರಕಾಶ್ ನಾಯಕ್ ಮತ್ತು ಭೋಜ ಎಂಬವರುಗಳು ಗೋವಿಂದ್ ರವರ ಬಳಿ ಹಾಲು ಉತ್ಪಾದಕರ ಸಂಘದ ಅವ್ಯಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಜಾತಿ ನಿಂದನೆ ಮಾಡಿರುತ್ತಾರೆ ಹಾಗೂ ಇಬ್ಬರೂ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ ತೆರಳಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 160/2023 ಕಲಂ: 3(1)(r),3(1)(s) The SC/ST PA Act-2015 ಹಾಗೂ 323,504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























