ದುಬೈ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸೆ.15 ರಂದು ದುಬೈಗೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿರುವ ಪುತ್ತೂರಿನವರನ್ನು ಭೇಟಿಯಾದರು.

ದುಬೈಯ ಜುಮೈರಾ ತಾಜ್ ಹೊಟೇಲಿನಲ್ಲಿ ಶಾಸಕರಿಗೆ ಆತ್ಮೀಯ ಸ್ವಾಗತ ನೀಡಿ, ಅಭಿನಂದಿಸಿದರು.

ಬಳಿಕ ನಡೆದ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಅಶೋಕ್ ರೈ, ಚುನಾವಣೆ ಸಂದರ್ಭ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ದುಬೈನಲ್ಲಿ ನೆಲೆಸಿರುವ ನಮ್ಮೂರಿನ ಯುವಕರ ಸಹಕಾರ ಅವಿಸ್ಮರಣೀಯ. ನಮ್ಮೂರಿನ ಜನಪರ ಕೆಲಸಗಳಿಗೆ ಸದಾ ನಿಮ್ಮ ಬೆಂಬಲ ಮುಂದೆಯೂ ಬೇಕು ಎಂದು ಹೇಳಿ, ದುಬೈಯ ಪುತ್ತೂರಿಗರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಸ್ತಾಫಾ ಕೋಡಿಂಬಾಡಿ, ಖಲೀಲ್ ಬಿ.ಎಚ್., ಅಜಿತ್ ಕೋಡಿಂಬಾಡಿ, ಅನ್ಸಾರ್ ಬಿ.ಎಚ್., ಸಿನಾನ್ ಮೊದಲಾದವರು ಉಪಸ್ಥಿತರಿದ್ದರು.



























