ಪುತ್ತೂರು : ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದಲ್ಲಿ ಕಳವುಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಸೆ.12 ರಂದು ರಾತ್ರಿ ಪೂಜೆಯ ಬಳಿಕ ದೇವಸ್ಥಾನದ ಬೀಗ ಹಾಕಿ ಹೋಗಿದ್ದು, ಮರುದಿನ ಸೆ.13 ರಂದು ಬೆಳಗ್ಗೆ ದೇವಸ್ಥಾನದ ಅರ್ಚಕರು ದೇವಸ್ಥಾನಕ್ಕೆ ಬಂದಾಗ, ಅಲ್ಲಿ ಇದ್ದ ಎರಡೂ ಕಾಣಿಕೆ ಹುಂಡಿಗಳ ಮುಚ್ಚಳದ ಬೀಗ ಮುರಿದಿರುವಂತೆ ಕಂಡು ಬಂದಿದ್ದು, ಕೂಡಲೇ ಅಧ್ಯಕ್ಷರಿಗೆ ಪೋನ್ ಕರೆ ಮಾಡಿ ತಿಳಿಸಿರುತ್ತಾರೆ. ಅಧ್ಯಕ್ಷರು ಬಂದು ನೋಡಿದಾಗ ಯಾರೋ ಕಳ್ಳರು ಹುಂಡಿಗಳ ಬೀಗವನ್ನು ಮುರಿದು ಅದರಲ್ಲಿದ್ದ ಅಂದಾಜು 43,000 ರೂ ಹಣವನ್ನು ಕಳವು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 91-2023 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.