ಆಲಂಕಾರು : ಶ್ರೀದುರ್ಗಾ ಡೋರ್ಸ್ & ಪ್ಲೈವುಡ್ ಮಳಿಗೆಯು ಸೆ.21 ರಂದು ಆಲಂಕಾರು ಶ್ರೀ ದುರ್ಗಾ ಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ.
ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲು ಉದ್ಘಾಟನೆ ನೆರವೇರಿಸಲಿದ್ದಾರೆ.
ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿ ಕುಂಜಲಡ್ಕ, ಆಲಂಕಾರು ಜೇಸಿಐ ಅಧ್ಯಕ್ಷರಾದ ಜೇಸಿ ಹೆಚ್.ಜಿ. ಎಫ್. ಲಕ್ಷ್ಮೀ ನಾರಾಯಣ ಅಲೆಪ್ಪಾಡಿ, ಶ್ರೀ ದುರ್ಗಾ ಕಾಂಪ್ಲೆಕ್ಸ್ ಮಾಲಕರಾದ ರಾಧಾಕೃಷ್ಣ ರೈ, ನೀರಾಜೆ ಆತೂರು ಮುದರಿಸ್ ಆಶ್ರಫ್ ಮುಸ್ಲಿಯಾರ್ ಕೋಲ್ಪೆ, ಆಲಂಕಾರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ದಿನೇಶ್ ಕೇಪುಳು, ಆಲಂಕಾರು ಶ್ರೀ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ನ ಮಾಲಕರಾದ ನಾರ್ಣಪ್ಪ ಗೌಡ, ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷರಾದ ಜಯಂತ್ ನೆಕ್ಕಿಲಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.



























