ಕೊಕ್ಕಡ : ನೈಮಿಷ ರವರ ಶುದ್ಧ ಗಾಣದ ಕೊಬ್ಬರಿ ಎಣ್ಣೆ ‘ಕೋಕೋ ಡ್ಯೂ’ ಸೌತಡ್ಕ ಶ್ರೀ ದೇವರ ಸನ್ನಿಧಿಯಲ್ಲಿ ಲೋಕಾರ್ಪಣೆಗೊಂಡಿತು.

ಸೌತಡ್ಕ ದೇವಳದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲುರಾಯರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ನೈಮಿಷ ಹೌಸ್ ಆಪ್ ಸ್ಪಯ್ಸಸ್ ನ ಮಾಲಕರಾದ ಬಾಲಕೃಷ್ಣ ನೈಮಿಷ ಅವರ ಪತ್ನಿ ರಿಂಕಾ ಬಾಲಕೃಷ್ಣ, ಪುತ್ರ ವಿಖ್ಯಾತ್ ಹಾಗೂ ಗೋಪಾಲನ್ ಅಡೂರ್, ಚಂದ್ರನ್ ಬಿ. ಸಿ, ಪ್ರೊಪರೇಟರ್ ಕೈರಾಲಿ ಮ್ಯಾನುಫ್ಯಾಕ್ಟರಿಂಗ್ ಯೂನಿಟ್ ಕಾಸರಗೋಡು, ಮನೋಜ್ ಕೈರಾಲಿ ಮ್ಯಾನುಫ್ಯಾಕ್ಟರಿಂಗ್ ಯೂನಿಟ್ ಕಾಸರಗೋಡು, ಅಭಿಷೇಕ್ ಮೋಹನ್ ಕಾಸರಗೋಡು ಉಪಸ್ಥಿತರಿದ್ದರು.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶುದ್ಧಗಾಣದ ಎಣ್ಣೆಯನ್ನು ತಯಾರಿಸಿ ಕೊಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಬಾಲಕೃಷ್ಣ ನೈಮಿಷ ರವರು ತಿಳಿಸಿದರು.


























