ಬಂಟ್ವಾಳ : ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ, ಮಟ್ಕಾ ಚೀಟಿ ಬರೆಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲೂಕು ಕೈಕಂಬ ಜಂಕ್ಷನ್ ಬಳಿ ನಡೆದಿದೆ.
ಚಂದ್ರಹಾಸ, ಪುರುಷೋತ್ತಮ ಬಂಧಿತರು.
ಕೈಕಂಬ ಜಂಕ್ಷನ್ ಬಳಿಗೆ ಅಕ್ರಮವಾಗಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ, ಮಟ್ಕಾ ಚೀಟಿ ಬರೆಯುತ್ತಿದ್ದಾಗ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡ, ಕೃತ್ಯದಲ್ಲಿ ತೊಡಗಿದ್ದ ಚಂದ್ರಹಾಸ ಮತ್ತು ಪುರುಷೋತ್ತಮ ಎಂಬವರುಗಳನ್ನು ವಶಕ್ಕೆ ಪಡೆದು, ಅವರಿಂದ ಮಟ್ಕಾ ಚೀಟಿ ಬರೆಯುತ್ತಿದ್ದ ಪುಸ್ತಕ, ಪೆನ್ನು, ನಗದು ಹಣ ರೂಪಾಯಿ 1770/- ಹಾಗೂ ಕಾರ್ಬನ್ ಹಾಳೆಯನ್ನು ಸ್ವಾದೀನಪಡಿಸಲಾಗಿದ್ದು, ಈ ಬಗ್ಗೆ ನ್ಯಾಯಾಲಯದ ಅನುಮತಿ ಮೇರೆಗೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ 103/202, ಕಲಂ: 78 KP ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























