ಇಸ್ಲಾಂ ಪ್ರಾರ್ಥನೆ ‘ಬಿಸ್ಮಿಲ್ಲಾ’ ಪಠಿಸಿ ಹಂದಿ ಮಾಂಸ ಸೇವಿಸಿದ ಮಹಿಳಾ ಟಿಕ್‌ಟಾಕ್ ಸ್ಟಾರ್‌ಗೆ ಇಂಡೋನೇಷ್ಯಾದಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹಂದಿ ಮಾಂಸ ಸೇವನೆ ಇಸ್ಲಾಂನಲ್ಲಿ ನಿಷೇಧಿತ. ಹೀಗಿದ್ದೂ ಲೀನಾ ಮುಖರ್ಜಿ ಎಂಬಾಕೆ ಮುಸ್ಲಿಂ ಪ್ರಾರ್ಥನೆ “ಬಿಸ್ಮಿಲ್ಲಾ” ಅಂತ ಹೇಳಿ ಪೋರ್ಕ್ ಸೇವನೆ ಮಾಡಿದ್ದಾಳೆ.
ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ಲು. ವಿಡಿಯೋನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಹಿಳೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಆದರೆ ಮಹಿಳೆ ನನಗೆ ಈ ಬಗ್ಗೆ ಏನು ಗೊತ್ತಿಲ್ಲವೆಂದು ಕ್ಷಮಿಸುವಂತೆ ಕೇಳಿಕೊಂಡಿದ್ದಾಳೆ.



























