ಬಂಟ್ವಾಳ : ಶ್ರೀ ರಾಧಾ ಸುರಭಿ ಗೋಮಂದಿರ , ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ವತಿಯಿಂದ ಸನಾತನ ಧರ್ಮದ ಉಳಿವಿಗಾಗಿ ಭಕ್ತ ಜನರಲ್ಲಿ ಶ್ರೀ ಮದ್ಭಾಗವತ ಮತ್ತು ಗೋವಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಶ್ರೀ ಭಕ್ತಿ ಭೂಷಣದಾಸ್ ಪ್ರಭು ರವರ ಮಾರ್ಗದರ್ಶನದಲ್ಲಿ ಧರ್ಮ ರಕ್ಷಾರ್ಥ , ರಾಷ್ಟ್ರ ರಕ್ಷಾರ್ಥ, ಗೋ ರಕ್ಷಾರ್ಥ, ಉದ್ದೇಶ ದೊಂದಿಗೆ ಅಷ್ಟೋತ್ತರ ಶತ (೧೦೮) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗವು ನ.14- ರಿಂದ 22ರವರೆಗೆ ಗೋ ನವರಾತ್ರೆ ಉತ್ಸವವು ಧರ್ಮಾಧಾರಿತ ವಿಶ್ವಗುರು ಭಾರತ ಆಗಬೇಕೆಂಬ ಆಶಯದೊಂದಿಗೆ ಆಯೋಜಿಸಲಾಗಿದೆ ಅದಕ್ಕೆ ಪೂರ್ವ ಭಾವಿಯಾಗಿ ಪ್ರಚಾರದದ ದೃಷ್ಟಿಯಲ್ಲಿ ದ.ಕ , ಉಡುಪಿ , ಕೊಡಗು ಜಿಲ್ಲೆಗಳಲ್ಲಿ ಗೋ ರಥ ಯಾತ್ರೆ ಸಂಚರಿಸಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷರಾದ ಕ್ಯಾಪ್ಟನ್ ಬೃಜೇಶ್ ಚೌಟ ರವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ , ಉಪಾಧ್ಯಕ್ಷರಾದ ಅನಿಲ್ ಪಂಡಿತ್ , ದಿನೇಶ್ ಶೆಟ್ಟಿ ಕೊಟ್ಟಿಂಜ , ವಿನಯ್ ಕುಮಾರ್ ಕಡೆಗೋಳಿ , ಕೀರ್ತನ್ ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ ಯವರು ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ ವಂದಿಸಿದರು.



























