ಸುಳ್ಯ : ಹಳೆಗೇಟು ಗಣೇಶ ಚತುರ್ಥಿ ಎಂಬ ಹೆಸರಿನಲ್ಲಿ ಲಕ್ಕಿ ಕೂಪನ್ ಮಾಡಿ ಮದ್ಯದ ಬಾಟಲಿಯನ್ನು ಬಹುಮಾನ ಇರಿಸಿ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಎಚ್ಚರಿಕೆಯನ್ನು ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.

ಹಳೆಗೇಟು ಪರಿಸರದ ಓರ್ವ ಯುವಕ ಈ ಕೃತ್ಯ ನಡೆಸಿದ್ದು, ಆತನನ್ನು ಸುಳ್ಯ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನು ತಪ್ಪು ಮಾಡಿರುವುದಾಗಿಯೂ, ಈ ವಿಷಯ ಇಷ್ಟೊಂದು ದೊಡ್ಡ ಪ್ರಕರಣವಾಗಿ ಸಂಭವಿಸುವ ವಿಚಾರ ತಿಳಿಯದೆ ಈ ರೀತಿ ಮಾಡಿರುವುದಾಗಿದೆ ಕ್ಷಮೆ ಯಾಚಿಸಿದ್ದು, ಬಳಿಕ ಪೊಲೀಸರು ಆತನಿಂದ ಮುಚ್ಚಳಿಕೆ ಬರೆಯಿಸಿ, ಕಿರು ಪ್ರಕರಣ ದಾಖಲಿಸಿ ಎಚ್ಚರಿಕೆಯನ್ನು ನೀಡಿ ಕಳುಹಿಸಿಕೊಟ್ಟಿರುವುದಾಗಿ ವರದಿಯಾಗಿದೆ.