ವಿದ್ಯಾಭಾರತಿ ಕರ್ನಾಟಕ ಕ್ಷೇತ್ರೀಯ ಮಟ್ಟದ ಕಬಡ್ಡಿ ಪಂದ್ಯಾಟವು ಹೈದರಾಬಾದ್‍ನಲ್ಲಿ ದಿನಾಂಕ 02-09-2023 ರಿಂದ 03-09-2023ರ ವರೆಗೆ ನಡೆಯಿತು.
ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14ರ ವಯೋಮಾನದ ಬಾಲಕರ ತಂಡವು ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಅಕ್ಟೋಬರ್ 7ನೇ ತಾರೀಕಿನಿಂದ 10ನೇ ತಾರೀಕು ತನಕ ಪಂಜಾಬ್‍ನ ಅಂಬಾಲದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

14ರ ವಯೋಮಾನದ ಬಾಲಕರ ತಂಡದ ವಿವರ ಈ ಕೆಳಗಿನಂತಿದೆ:
ತಂಡದ ನಾಯಕನಾಗಿ ರಿತೇಶ್.ಕೆ ( ವೆಂಕಪ್ಪ.ಕೆ ಮತ್ತು ವೀಣಾ ದಂಪತಿ ಪುತ್ರ), ಪ್ರಣಾಮ್.ಎಂ (ಎಂ.ಕೇಶವ ರಾವ್ ಮತ್ತು ಸುಭಾಷಿಣಿ ದಂಪತಿ ಪುತ್ರ), ಚಿನ್ಮಯಿ.ಸಿ.ಎಸ್ (ಶೇಷಪ್ಪ ಮೂಲ್ಯ ಮತ್ತು ಚಂದ್ರಿಕಾ ದಂಪತಿ ಪುತ್ರ), ಪ್ರೀತಮ್ ( ಜಯಂತ ಗೌಡ ಮತ್ತು ಲೀಲಾವತಿ ದಂಪತಿ ಪುತ್ರ), ಮೋಶಿತ್.ಕೆ.ಜೆ ( ಜಗದೀಶ ಮತ್ತು ಪ್ರೇಮ ಕುಮಾರಿ ದಂಪತಿ ಪುತ್ರ), ಯಶ್ಮಿತ್.ಎಂ.ಡಿ (ದಯಾನಂದ ಮತ್ತು ಪುಷ್ಪ ದಂಪತಿ ಪುತ್ರ) ತೃತೇಶ್.ಬಿ ( ಅಶೋಕ್.ಬಿ.ಬಿ ಮತ್ತು ಪರ‍್ಣಿಮಾ.ಬಿ ದಂಪತಿ ಪುತ್ರ), ಅಶ್ವಿನ್ ( ಜಯಂತ ಮತ್ತು ಶಾಲಿನಿ ದಂಪತಿ ಪುತ್ರ), ಸ್ನೇಹಿತ್ ಕುಮಾರ್ ( ಈಶ್ವರ ಕಜೆ ಮತ್ತು ವೀಣಾ.ಎಂ.ಕೆ ದಂಪತಿ ಪುತ್ರ), ಜಿತಿನ್.ಕೆ ( ಮೋಹನ ಮತ್ತು ರಂಜಿತಾ ದಂಪತಿ ಪುತ್ರ), ನಿವೇದ್ ( ರಾಜೇಶ್ ಮತ್ತು ಅಶ್ವಿನಿ) ಮತ್ತು ಮನ್ವಂತ್ ಗೋಪಾಲ್ ( ಗೋಪಾಲ್ ಗೌಡ ಮತ್ತು ನಮಿತಾ.ಎಂ.ಎ ದಂಪತಿ ಪುತ್ರ)


























