ಉಪ್ಪಿನಂಗಡಿ : ಪತ್ನಿಗೆ ವಂಚಿಸಿ ಇನ್ನೊಂದು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಬ್ದುಲ್ ಜಲೀಲ್ ಬಂಧಿತ ಆರೋಪಿ.
ಜಲೀಲ್ ಪತ್ನಿಯ ತಂದೆ 2020 ರಲ್ಲಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 128 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.
ಜಲೀಲ್ ಪತ್ನಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
2019 ರಲ್ಲಿ ಜಲೀಲ್ ಮದುವೆಯಾಗಿದ್ದು, ಮದುವೆ ಆದ ನಂತರದಲ್ಲಿ ಜಲೀಲ್ ವಿದೇಶಕ್ಕೆ ಹೋಗಿದ್ದು, ಜಲೀಲ್ ಸಹೋದರರು ಆತನ ಪತ್ನಿ ವಾಸ ಇರುವ ಮನೆಯಲ್ಲಿಯೇ ವಾಸವಿದ್ದು, ಜಲೀಲ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದು, ಫೋನ್ ಕರೆಯಲ್ಲಿ ಕುಟುಂಬಕ್ಕೆ ಮತ್ತು ಜಲೀಲ್ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈಯುವುದು ಅಲ್ಲದೆ ನೀನು ಮನೆಯಿಂದ ಹೊರಗೆ ಹೋಗು ನಾನು ನಿನಗೆ ತಲಾಖ್ ನೀಡಿರುತ್ತೇನೆ. ನೀನು ನಿನ್ನ ತವರು ಮನೆಗೆ ಹೋಗದಿದ್ದರೆ ನನ್ನ ತಮ್ಮಂದಿರಿಂದ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ.
ಬೈದಿರುವುದಲ್ಲದೆ ನಿಂದಿಸುವುದು, ಆಕೆಗೆ ಆಹಾರ ನೀರು ನೀಡದೆ ಸತಾಯಿಸುವುದು, ಜೀವ ಬೆದರಿಕೆ ಹಾಕಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ.
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನ್ನು ಪಿಎಸ್ಐ ರವರ ಮಾರ್ಗದರ್ಶನದಲ್ಲಿ ಹೆಚ್ ಸಿ ಗಜೇಂದ್ರ, ಪಿಸಿ ಅಭಿಜಿತ್ ರವರು ದಸ್ತಗಿರಿ ಮಾಡಿ ಪುತ್ತೂರು ನ್ಯಾಯಲಯಕ್ಕೆ ಹಾಜರುಪಡಿಸಿದರು.

























