ಬೆಂಗಳೂರು: ಉದ್ಯಾನ ನಗರಿ, ಸಿಲಿಕಾನ್ ಸಿಟಿ, ರಾಜಧಾನಿ ಬೆಂಗಳೂರು ಟ್ರಾಫಿಕ್ ಜಾಮ್ಗೂ ಫೇಮಸ್. ಗಂಟೆಗಟ್ಟಲೆ ಈ ಟ್ರಾಫಿಕ್ ಜಾಮ್ನಲ್ಲಿ ನಿಂತ ಅದೆಷ್ಟೋ ಮಂದಿ ತಮ್ಮ ಕರಾಳ ಅನುಭವಗಳನ್ನ ಹಂಚಿಕೊಂಡಿದ್ದಾರೆ.
ನಿನ್ನೆ ನಗರದ ಹಲವೆಡೆ ಉಂಟಾದ ಟ್ರಾಫಿಕ್ ಜಾಮ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬೆಂಗಳೂರಿನ ಔಟರ್ ರಿಂಗ್ ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಆಗಿದ್ದಕ್ಕೆ ಹಲವಾರು ಜನ ತಮ್ಮ ಬೇಸರ ಹೊರ ಹಾಕಿದ್ದಾರೆ.
ಉದ್ಯಮಿ ಸಮಿತ್ ಸಿಂಗ್ ಎಂಬುವವರು ನಿನ್ನೆಯೇ ಟ್ರಾಫಿಕ್ ಜಾಮ್ ಬಗ್ಗೆ ಟ್ವೀಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಟ್ವೀಟ್ ಮಾಡಿರೋ ಅವರು ನಿನ್ನೆ ಸಂಜೆ 6.30ಕ್ಕೆ ಮನೆಗೆ ಬರಬೇಕಾದ ಶಾಲಾ ಮಕ್ಕಳು ರಾತ್ರಿ 8 ಗಂಟೆಯಾದ್ರೂ ದಾರಿಯಲ್ಲೇ ಇದ್ದರು. ಕೆಲವರನ್ನ 8 ಗಂಟೆಗೆ ಮನೆಗೆ ಬಿಡಲಾಗಿದೆ. 16 ಕಿಲೋ ಮೀಟರ್ ಪ್ರಯಾಣಕ್ಕೆ ಸರಿ ಸುಮಾರು 4 ಗಂಟೆ 30 ನಿಮಿಷ ಕಾಲಾವಕಾಶ ತೆಗೆದುಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಹಲವರು ನಿನ್ನೆ ಸಂಜೆ ಬೆಂಗಳೂರಲ್ಲಿ ಬರೀ 3 ಕಿಲೋ ಮೀಟರ್ ಪ್ರಯಾಣಕ್ಕೆ 1 ಗಂಟೆ 30 ನಿಮಿಷ ಬೇಕಾಯ್ತು. ಮಾನ್ಯತಾ ಟೆಕ್ ಪಾರ್ಕ್ನಿಂದ ಮಾರತಹಳ್ಳಿಗೆ ಬರಲು ಬರೋಬ್ಬರಿ 4 ಗಂಟೆ 30 ನಿಮಿಷ ತಗುಲಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಬೆಂಗಳೂರು ಟ್ರಾಫಿಕ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ.
HSR layout flyover towards sarjapura and Bellandur at 8:15pm
— Rohith Kashyap (@RohithKashyap26) September 27, 2023
I experienced one of the worst days of my life in Blr traffic. Left Eco world at 3:45pm and reached Kathriguppe at 9:15pm. Traffic horror in Bengaluru.@0RRCA @east_bengaluru @blrcitytraffic @BlrCityPolice pic.twitter.com/9B5BNUMSrA


























