ಪುತ್ತೂರು : ನವರಾತ್ರಿಯಂದು ಹತ್ತೂರಿನ ಜನರನ್ನ ರಂಜಿಸಲು ಟೀಮ್ ಕಲ್ಲೇಗ ಟೈಗರ್ಸ್ ಸಿದ್ದವಾಗಿದ್ದು, ಇಂದು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ 6ನೇ ವರ್ಷದ ‘ಪಿಲಿಏಸ’ ದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಕಳೆದ 5 ವರ್ಷಗಳಿಂದ ಕಲ್ಲೇಗ ಟೈಗರ್ಸ್ ತಂಡವೂ ನವರಾತ್ರಿಯ ದಿನ ಹುಲಿವೇಷ ಹಾಕಿ, ಪುತ್ತೂರಿನ ರಸ್ತೆಗಳಲ್ಲಿ ಸಂಚರಿಸಿ ತಾಸೆಯ ಪೆಟ್ಟಿಗೆ ಕುಣಿದು ಎಲ್ಲರನ್ನ ರಂಜಿಸುತ್ತಾ ಬಂದಿದೆ.
ಅಂತೆಯೇ ಈ ವರ್ಷ ಅಕ್ಟೋಬರ್ 19 ರಂದು ರಾತ್ರಿ ಊದು ಪೂಜೆ ನಡೆದು, ಬಳಿಕ ಅಕ್ಟೋಬರ್ 20 ರಂದು ಕಲ್ಲೆಗ ಶ್ರೀ ಕಲ್ಕುಡ ದೈವಸ್ಧಾನದಲ್ಲಿ ಹುಲಿ ಇಳಿಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಪುತ್ತೂರಿನ ಪೇಟೆಯಲ್ಲಿ ಸಂಚರಿಸಲಿದೆ.
ಇನ್ನು ಇಂದು ‘ಪಿಲಿಏಸ’ ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ.
ಕಳೆದ ಬಾರಿ ನಡೆದ ‘ಪಿಲಿಗೊಬ್ಬಿ’ ನಲ್ಲಿ ಪುತ್ತೂರಿನ ಇತಿಹಾಸದಲ್ಲೆ ಪ್ರಪ್ರಥಮ ಭಾರಿಗೆ, ಸುಮಾರು 60 ಹುಲಿಗಳು ಬಣ್ಣ ಹಚ್ಚಿ ತಾಸೆಯ ಪೆಟ್ಟಿಗೆ ಕುಣಿದು ಇತಿಹಾಸ ನಿರ್ಮಿಸಿತ್ತು. ಇನ್ನು ಕಳೆದ ವರ್ಷ ಬಿಗ್‌ಬಾಸ್ ವೇದಿಕೆಯಲ್ಲಿ ಹುಲಿ ವೇಷ ಹಾಕಿ ಕುಣಿದ ಹೆಗ್ಗಳಿಕೆಯೂ ಈ ತಂಡಕ್ಕಿದೆ.