ಪುತ್ತೂರು : ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಯೋಜಕರಾಗಿ ಮೋಹನ್ ದಾಸ್ ಕಾಣಿಯೂರು, ಸಹ ಸಂಯೋಜಕರುಗಳಾಗಿ ಭರತ್ ಈಶ್ವರಮಂಗಲ ಮತ್ತು ದಿನೇಶ್ ಪಂಜಿಗ ಹಾಗೂ ಹಿಂದೂ ಯುವ ಆಯಾಮದ ಪ್ರಮುಖ್ ಆಗಿ ನಿಕೇಶ್ ಸುಳ್ಯ ರನ್ನು ಹಿಂದೂ ಜಾಗರಣ ವೇದಿಕೆ ಮಂಗಳೂರು ಬೈಠಕ್ ನಲ್ಲಿ ಘೋಷಣೆ ಮಾಡಲಾಗಿದೆ.

ಹಿಂ.ಜಾ.ವೇ ಪ್ರಾಂತ ಸಂಯೋಜಕ ಧೋ ಕೇಶವ ಮೂರ್ತಿ, ಸಹ ಸಂಯೋಜಕ ಸತೀಶ್ ದಾವಣಗೆರೆ, ಸಂಪರ್ಕ ಪ್ರಮುಖ್ ಹರೀಶ್ ಮಂಗಳೂರು, ನಿಧಿ ಪ್ರಮುಖ್ ರವಿರಾಜ್ ಕಡಬ ಅವರ
ಉಪಸ್ಥಿತಿಯಲ್ಲಿ ಘೋಷಣೆ ಮಾಡಲಾಯಿತು ಎಂದು ವರದಿಯಾಗಿದೆ.