ಸುಳ್ಯ : ಕಲ್ಮಕಾರಿನ ಯುವಕನೋರ್ವ ತನ್ನಿಂದ ಪೊಲೀಸರು ಹಣ ಪಡೆದಿರುವ ಸಾಕ್ಷಿಕರಿಸುವ ವೀಡಿಯೋ ಮಾಡಿಕೊಂಡಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಲ್ಮಕಾರಿನ ನಿಡುಬೆ ಓಂ ಪ್ರಕಾಶ್ ಹಣ ನೀಡಿದ ಯುವಕ.
ಇವರು ಪೊಲೀಸರಿಗೆ ಸ್ಥಳದಲ್ಲಿ ಹಣ ನೀಡಿದ ಬಳಿಕ ಪೊಲೀಸರಲ್ಲಿ ರಶೀದಿ ಕೇಳಿದಾಗ ಪೊಲೀಸರು ಕೋರ್ಟ್ ನೋಟೀಸು ನೀಡಿದ್ದು, ಮತ್ತು ಬೈಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ನೋಟಿಸ್ ನೀಡಿ ಕೋರ್ಟಿಗೆ ಹಾಜರಾಗುವಂತೆ ತಿಳಿಸಿದ್ದಾರೆ. ಈ ಎಲ್ಲಾ ಘಟನೆ ಗುಪ್ತವಾಗಿ ಯುವಕ ವೀಡಿಯೋ ಮಾಡಿಕೊಂಡಿದ್ದು, ನಂತರ ಯುವಕ ವೀಡಿಯೋ ವೈರಲ್ ಮಾಡಿದ್ದು, ಯಾವುದೇ ಸರಕಾರಿ ಸೇವೆಯಲ್ಲಿರುವವರು ಸ್ಥಳದಲ್ಲಿ ಹಣ ಪಡೆದ ಬಳಿಕ ಸ್ಥಳದಲ್ಲಿಯೇ ರಸೀದಿ ನೀಡಬೇಕಾದ್ದು ನಿಯಮ, ಕೋರ್ಟ್ ನಲ್ಲಿ ಕಟ್ಟಬೇಕಾದ ಹಣ ಕೋರ್ಟ್ ನಲ್ಲಿಯೇ ಕಟ್ಟಲು ಎಂದು ಯುವಕ ದೂರಿದ್ದಾನೆ.
ಪೊಲೀಸರಿಂದ ಸ್ಪಷ್ಟನೆ :
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಬೈಕ್ ಚಾಲಕನ ವಿರುದ್ಧ ನಿರ್ಲಕ್ಷ್ಯ ಚಾಲನೆಯ ಕೇಸು ಹಾಕಿರುವುದು ಹೌದು.., ಆದರೇ 91/F ಪ್ರಕರಣವಾದುದರಿಂದ ರಸೀದಿಯನ್ನು ಸ್ಥಳದಲ್ಲಿಯೇ ನೀಡಬೇಕೆಂದೇನು ಇಲ್ಲ, ಇದು ಪೆಟ್ಟಿ ಕೇಸ್ ಆಗಿದ್ದು, ಯುವಕನಿಂದ ಪಡೆದ ಹಣವನ್ನು ಕೋರ್ಟ್ ನಲ್ಲಿ ನಾವು ಕಟ್ಟಲಿದ್ದು, ಇದರ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ ಈ ಬಗ್ಗೆ ಯಾವುದೇ ಕಾನೂನು ತಜ್ಞರಲ್ಲಿ ವಿಚಾರಿಸಿಕೊಳ್ಳಬಹುದು ಅಥವಾ ಕಾನೂನು ಮೊರೆ ಹೋಗಬಹುದು ಮತ್ತು ಕರ್ತವ್ಯದಲ್ಲಿರುವ ಪೊಲೀಸರ ವೀಡಿಯೋ ಹರಿಬಿಟ್ಟು ಪೊಲೀಸರ ನೈತಿಕ ಬಲ ಕುಗ್ಗಿಸುವ ಕೆಲಸ ಇದಾಗಿದೆ ಎಂದು ಹೇಳಿದ್ದಾರೆ.