ವಿಟ್ಲ : ವಿಶ್ವ ಹಿಂದೂ ಪರಿಷದ್ ಬಜರಂಗದಳದ ನೇತೃತ್ವದಲ್ಲಿ ಅ.8 ರಂದು ನಡೆಯುವ ಶೌರ್ಯ ಜಾಗೃತ ರಥಯಾತ್ರೆಯ ಸಲುವಾಗಿ ಬಿಸಿರೋಡ್ ನಲ್ಲಿ ನಡೆಯುವ ಶೌರ್ಯ ಜಾಗೃತ ಹಿಂದೂ ಸಮಾಜೋತ್ಸವದ ಪೂರ್ವ ತಯಾರಿ ಬೈಠಕ್ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಈ ಬೈಠಕ್ ನ್ನು ಜಿಲ್ಲಾ ಸಸ್ಸಂಗ ಪ್ರಮುಖ್ ಸೂರ್ಯನಾರಾಯಣ ಭಟ್ ಕಶೆಕೋಡಿ ನೆರೆವೇರಿಸಿದರು.

ವಿಶ್ವ ಹಿಂದೂ ಪರಿಷದ್ ಜಿಲ್ಲಾ ಮಠ-ಮಂದಿರ ಪ್ರಮುಖ್ ಪದ್ಮನಾಭ ಕಟ್ಟೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್, ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡ ಅಧ್ಯಕ್ಷ ವಿಶ್ವನಾಥ್ ಹಾಗೂ ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕರಾದ ಚೇತನ್ ಕಡಂಬು ಹಾಗೂ ವಿಟ್ಲ ಪ್ರಖಂಡದ 13 ಗ್ರಾಮಗಳ ಪರಿವಾರ ಸಂಘಟನೆಯ ಪ್ರಮುಖರು ಮತ್ತು ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು.


























