ಭೋಪಾಲ್ : ಟೈಮ್ ಸರಿ ಇಲ್ಲ ಅಂದ್ರೆ ಯಾವಾಗ ಏನ್ ಬೇಕಾದ್ರೂ ಆಗಬಹುದು. ರಸ್ತೆ ಅಪಘಾತಗಳು ಅಷ್ಟೇ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಜೀವ ಕಳೆದುಕೊಳ್ತಾರೆ. ಬದುಕಿ ಉಳಿದವರು ಜೀವನ ಪರ್ಯಂತ ನೋವು ಅನುಭವಿಸುತ್ತಾರೆ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಭಯಾನಕ ಅಪಘಾತವೊಂದು ಸಂಭವಿಸಿದೆ.
ಕಾರು ಚಾಲಕನ ಡ್ಯಾಶ್ ಬೋರ್ಡ್ ಕ್ಯಾಮೆರಾದ ಅಪಘಾತದ ದೃಶ್ಯ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಖಾಸಗಿ ಬಸ್ವೊಂದು ನೋಡ ನೋಡುತ್ತಿದ್ದ ನದಿಗೆ ಉರುಳಿ ಬಿದ್ದಿದೆ. ಸೇತುವೆ ಮೇಲೆ ಹೋಗಬೇಕಿದ್ದ ಕಾರಿನ ಚಾಲಕ ಎಡ ತಿರುವಿನಲ್ಲಿ ಸೀದಾ ನದಿಗೆ ಜಾರಿದೆ. ಈ ಬಸ್ ಅನ್ನು ಒಂದು ಕಾರು ಹಿಂಬಾಲಿಸುತ್ತಿದ್ದು, ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಈ ಅಪಘಾತದ ದೃಶ್ಯ ಸೆರೆಯಾಗಿದೆ.
ಈ ಬಸ್ನಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಸ್ ನದಿಗೆ ಜಾರಿ ಬಿದ್ದ ಕೂಡಲೇ ಸ್ಥಳೀಯರು ಓಡಿ ಬಂದಿದ್ದು, ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಲು ಮುಂದಾಗಿದ್ದಾರೆ. ಅದೃಷ್ಟವಶಾತ್ 25 ಪ್ರಯಾಣಿಕರಲ್ಲಿ 6 ಮಂದಿಗೆ ಗಂಭೀರ ಗಾಯಗಳಾಗಿವೆ. ಉಳಿದ 19 ಜನ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಅಧಿಕಾರಿಗಳ ಬಸ್ ಸರಿಯಾದ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಬಳಿ ನದಿಗೆ ಜಾರಿ ಬಿದ್ದಿದೆ ಎನ್ನಲಾಗಿದೆ.
Caught on Cam: Nearly 6 injured out of 25 who were on board — as bus falls into river in MP's Khargone district*
— Sneha Mordani (@snehamordani) September 29, 2023
Incident was caught in the camera of another bus coming from behind
Incident happened yesterday pic.twitter.com/8dj8AMSW28


























